ಮೈಸೂರು

ಗಂಜಿ ಕೇಂದ್ರಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದ ಸಚಿವ ಸೋಮಣ್ಣ

ಮೈಸೂರು,ಏ.2:- ಮೈಸೂರು ನಗರದ ವಿವಿಧೆಡೆ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನಿರ್ಗತಿಕರಿಗಾಗಿ ಹತ್ತು ಗಂಜಿ ಕೇಂದ್ರಗಳನ್ನು ತೆರೆಯಲಾಗಿದ್ದು, ಇಂದು ಸಚಿವ ವಿ.ಸೋಮಣ್ಣ ಆ ಸ್ಥಳಗಳಿಗೆ ಭೇಟಿ ನೀಡಿ ಧೈರ್ಯ ತುಂಬಿದರು.

ನಿನ್ನೆ ರಾಜಸ್ಥಾನಕ್ಕೆ ತೆರಳಲು ಸಿದ್ಧಗೊಂಡಿದ್ದ 162ಮಂದಿಯನ್ನು  ಕರೆತಂದು  ಸಿಐಟಿಬಿ ಛತ್ರದಲ್ಲಿರಿಸಿ ಊಟೋಪಚಾರ ನೀಡಲಾಗುತ್ತಿದ್ದು, ಅಲ್ಲಿಗೂ ತೆರಳಿ  ಉಳಿದಿರುವ ನಿರ್ಗತಿಕರಿಗೆ ಸಾಂತ್ವನ ಹೇಳಿದರು. ನೀವು ಯಾವುದೇ ಕಾರಣಕ್ಕೂ ಭಯಪಡಬೇಡಿ ನಿಮ್ಮ ಜೊತೆ ನಾವಿದ್ದೇವೆ. ನಿಮಗೆ ಯಾವುದೇ ಕೊರತೆಯಾಗದಂತೆ ನೋಡಿಕೊಳ್ಳುತ್ತೇವೆ. ಸರ್ಕಾರ ನಿಮ್ಮೊಂದಿಗಿದೆ ಎಂದು ಅಭಯ ನೀಡಿದರು.

ಈ ಸಂದರ್ಭ ಸಂಸದ ಪ್ರತಾಪ್ ಸಿಂಹ, ಬಿಜೆಪಿ ನಗರಾಧ್ಯಕ್ಷ ಶ್ರೀವತ್ಸ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: