ಕರ್ನಾಟಕಪ್ರಮುಖ ಸುದ್ದಿ

ಅರಣ್ಯ ಸಿಬ್ಬಂದಿ ಗುಂಡೇಟಿಗೆ ಬೇಟೆಗಾರ ಬಲಿ

ರಾಮನಗರ: ಯುವಕನೋರ್ವ ಬೇಟೆಗೆಂದು ತೆರಳಿ ಅರಣ್ಯ ಸಿಬ್ಬಂದಿಯ ಗುಂಡೇಟಿಗೆ ಬಲಿಯಾದ ಘಟನೆ ರಾಮನಗರ ಜಿಲ್ಲೆಯಲ್ಲಿ ನಡೆದಿದೆ.

ಕನಕಪುರ ತಾಲ್ಲೂಕಿನ ಉಯ್ಯಂಬಳ್ಳಿ ಅರಣ್ಯದಲ್ಲಿ ಈ ಘಟನೆ ನಡೆದಿದೆ. ದೊಡ್ಡ ಆಲಳ್ಳಿ ಗ್ರಾಮದ ನಿವಾಸಿ 24 ವರ್ಷದ ಗುರು ಎಂಬಾತನೇ ಅರಣ್ಯ ಸಿಬ್ಬಂದಿ ಗುಂಡೇಟಿಗೆ ಬಲಿಯಾದ ಯುವಕ. ಈತ ಮೂವರು ಸ್ನೇಹಿತರ ಜೊತೆ ಅರಣ್ಯ ಪ್ರದೇಶದಲ್ಲಿ ಬೇಟೆಗೆ ಹೋಗಿದ್ದ ಮಾಹಿತಿ ಪಡೆದ, ಅರಣ್ಯ ಇಲಾಖೆ ಸಿಬ್ಬಂದಿ ಇವರನ್ನು ಹಿಂಬಾಲಿಸಿ ಫೈರಿಂಗ್ ಮಾಡಿದ್ದಾರೆ. ಈ‌ ವೇಳೆ‌ ಗುಂಡೇಟಿನಿಂದ ಗುರು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಜೊತೆಯಲ್ಲಿದ್ದ ಮೂವರು ಸ್ನೇಹಿತರು ಪರಾರಿಯಾಗಿದ್ದಾರೆ. ಸಾತನೂರು ಪೊಲೀಸ್ ಠಾಣಾ  ವ್ಯಾಪ್ತಿಯಲ್ಲಿ‌ ಪ್ರಕರಣ ದಾಖಲಾಗಿದೆ.

(ಎಸ್‍.ಎನ್‍/ಎನ್‍.ಬಿ.ಎನ್)

Leave a Reply

comments

Related Articles

error: