ಮೈಸೂರು

ಕೋವಿಡ್- 19 ಸಿಎಂ ಪರಿಹಾರ ನಿಧಿಗೆ ಒಂದು ತಿಂಗಳ ವೇತನ,ಕ್ಷೇತ್ರದ ಅಭಿವೃದ್ಧಿ ನಿಧಿಯ ಒಂದು ಕೋಟಿ ಐವತ್ತು ಲಕ್ಷರೂ. ದೇಣಿಗೆ ಘೋಷಿಸಿದ ಮರಿತಿಬ್ಬೇಗೌಡ

ಮೈಸೂರು,ಏ.2:-ಮುಖ್ಯಮಂತ್ರಿಗಳ ಪರಿಹಾರ ನಿಧಿ ಕೋವಿಡ್-19 ವಿಧಾನ ಪರಿಷತ್ ಸದಸ್ಯ ಮರಿತಿಬ್ಬೇಗೌಡ  ಅವರಿಂದು ಒಂದು ತಿಂಗಳ ವೇತನ ಹಾಗೂ 2019-2020ನೇ ಸಾಲಿನ ಕ್ಷೇತ್ರದ ಅಭಿವೃದ್ಧಿ ನಿಧಿಯ ಒಂದು ಕೋಟಿ ಐವತ್ತು ಲಕ್ಷರೂ.ಗಳನ್ನು ದೇಣಿಗೆ ನೀಡುವುದಾಗಿ ಘೋಷಿಸಿದ್ದಾರೆ.

ವಿಶ್ವವನ್ನೇ ವ್ಯಾಪಿಸಿ ಮಾನವ ಸಮುದಾಯವನ್ನು ಅಪಾರ ಆತಂಕಕ್ಕೀಡು ಮಾಡಿರುವ ಕೊರೋನಾ ಹೆಮ್ಮಾರಿ ಕರ್ನಾಟಕವನ್ನು ಕಠಿಣವಾಗಿಯೇ ಕಾಡುತ್ತಿದೆ. ಇಂತಹ ವಿಷಮಕಾರಿ ಸಂದರ್ಭದಲ್ಲಿ ರಾಜ್ಯ ಸರ್ಕಾರವು ಕೈಗೊಳ್ಳುವ ಪರಿಹಾರೋದ್ದೇಶಿತ ಕಾರ್ಯಕ್ರಮಗಳಿಗೆ ಕೈಜೋಡಿಸಬೇಕಾದದ್ದು ಎಲ್ಲರ ಮಾನವೀಯ ಕರ್ತವ್ಯವವಾಗಿದೆ. ಈ ನಿಟ್ಟಿನಲ್ಲಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಕೋವಿಡ್-19ಗೆ 2020ರ ಮಾರ್ಚ್ ತಿಂಗಳ ಹಣವನ್ನು ನೀಡುತ್ತಿದ್ದೇನೆ ಎಂದಿದ್ದಾರೆ.

ರಾಜ್ಯ ಸರ್ಕಾರದಿಂದ ಶಾಸಕರಿಗೆ ಅವರು ಪ್ರತಿನಿಧಿಸುವ ಕ್ಷೇತ್ರದ ಅಭಿವೃದ್ಧಿ ನಿಧಿಯಾಗಿ ವಾರ್ಷಿಕ 2ಕೋಟಿ ರೂ.ಗಳನ್ನು ನೀಡಲಾಗುತ್ತಿದ್ದು ಈ ಸಂಬಂಧ ನನ್ನ ಕ್ಷೇತ್ರಕ್ಕೆ ನೀಡಲಾಗುವ 2019-2020ನೇ ಸಾಲಿನ ಅಭಿವೃದ್ಧಿ ನಿಧಿಯಿಂದ ಒಂದು ಕೋಟಿ ಐವತ್ತು ಲಕ್ಷರೂ.ಗಳನ್ನು ಸೂಚಿತ ಪರಿಹಾರ ನಿಧಿಗೆ ಸಲ್ಲಿಸಿದ್ದೇನೆ. ಈ ಎರಡು ಬಾಬ್ತಿನ ಹಣವನ್ನು ಮುಖ್ಯಮಂತ್ರಿ ಪರಿಹಾರ ನಿಧಿ ಕೋವಿಡ್-19ಗೆ ವರ್ಗಾಯಿಸುವ ಒಪ್ಪಿಗೆಪತ್ರವನ್ನು ವಿಧಾನ ಪರಿಷತ್ ಕಾರ್ಯದರ್ಶಿಗೆ ನೀಡಿರುವುದಾಗಿ ತಿಳಿಸಿದ್ದಾರೆ. ಈ ಮೂಲಕ ಕೊರೋನಾ ಸೋಂಕು ರೋಗವನ್ನು ತಡೆಗಟ್ಟಲು ಮುಖ್ಯಮಂತ್ರಿಗಳು ಕೈಗೊಳ್ಳುವ ಕಾರ್ಯಕ್ರಮಗಳಿಗೂ ಬೆಂಬಲ ಮತ್ತು ಸಹಕಾರ ನೀಡುವುದಾಗಿ ತಿಳಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: