ಮೈಸೂರು

ಆಶಾ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಪ್ರಕರಣ :ಇದೊಂದು ಅಮಾನವೀಯ ಘಟನೆ; ಮಾಜಿ ಸಚಿವ ಹೆಚ್.ವಿಶ್ವನಾಥ್ ವಿಷಾದ

ಮೈಸೂರು,ಏ.2:-  ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ಸಂದೇಶ ನೀಡಿರುವ ಮಾಜಿ ಸಚಿವ ಹೆಚ್.ವಿಶ್ವನಾಥ್ ಇದೊಂದು ಅಮಾನವೀಯ ಘಟನೆ ಎಂದಿದ್ದಾರೆ.

ಇದು ಮನುಷ್ಯರಾದವರು ಮಾಡುವಂತ ಕೆಲಸವಲ್ಲ. ಕಿಡಿಗೇಡಿಗಳನ್ನು ತಕ್ಷಣವೇ  ಹಿಡಿದು ಅವರಿಗೆ ಶಿಕ್ಷೆ ನೀಡಬೇಕು. ಇಂತಹ ಘಟನೆ ನಡೆಯಬಾರದಿತ್ತು. ವೈದ್ಯರು,‌ಪೊಲೀಸರು, ನರ್ಸ್ ಗಳು ಜೀವದ ಹಂಗನ್ನು ತೊರೆದು ಕೆಲಸ ಮಾಡುತ್ತಿದ್ದಾರೆ. ಇವರುಗಳ  ಜೊತೆ ಸಾರ್ವಜನಿಕರು ಗೌರವದಿಂದ ನಡೆದುಕೊಳ್ಳಬೇಕು. ಘಟನೆಗೆ ಕಾರಣರಾದವರನ್ನು ತಕ್ಷಣವೇ ಬಂಧಿಸಿ ಶಿಕ್ಷೆ ನೀಡಬೇಕು ಎಂದು ಹಲ್ಲೆ ಪ್ರಕರಣದ ಬಗ್ಗೆ ವಿಷಾದ ವ್ಯಕ್ತಪಡಿಸಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: