ಮೈಸೂರು

ಕಳೆದ ಹತ್ತು ದಿನಗಳಿಂದ ಬಡವರಿಗೆ ಆಹಾರ ಪೂರೈಸಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್

ಮೈಸೂರು,ಏ.2:- ಕೊರೋನಾ ಸೋಂಕು ಹಿನ್ನಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ  ಲಾಕ್ ಡೌನ್  ಘೋಷಣೆ ಜಾರಿಯಲ್ಲಿದ್ದು, ಕಳೆದ 10 ದಿನಗಳಿಂದ ಬಡವರಿಗೆ ಮಾಜಿ ಶಾಸಕ ಎಂ ಕೆ ಸೋಮಶೇಖರ್ ಆಹಾರ ಪೂರೈಸುತ್ತಿದ್ದಾರೆ.

ಮಾಜಿ ಶಾಸಕ ಎಂ ಕೆ ಸೋಮಶೇಖರ್ ಮೈಸೂರಿನ ಸುತ್ತ ಮುತ್ತಲಿನ ಬಡವರಿಗೆ,ಕೂಲಿ ಕಾರ್ಮಿಕರಿಗೆ ,ನಿರ್ಗತಿಕರಿಗೆ ಕಳೆದ 10 ದಿನಗಳಿಂದ ಉಚಿತವಾಗಿ ಆಹಾರ ಪೂರೈಸುತ್ತಿದ್ದಾರೆ. ಮೈಸೂರಿನ ಜೆಪಿ ನಗರ, ಧರ್ಮಸಿಂಗ್ ಕಾಲೋನಿ, ದೇವರಾಜ ಅರಸು ಕಾಲೋನಿ ಹಾಗೂ ನಾಚನಹಳ್ಳಿ ಪಾಳ್ಯದ1500ಕ್ಕೂ ಹೆಚ್ಚು  ಬಡವರು ಹಾಗೂ ಕೂಲಿ ಕಾರ್ಮಿಕರಿಗೆ ಮಾಜಿ ಶಾಸಕ ಎಂ.ಕೆ.ಸೋಮಶೇಖರ್   ಆಹಾರ,ನೀರು,ಮಾಸ್ಕ್,ಆಹಾರ ವಿತರಿಸಿದರು. ಜನರು ಅಂತರ ಕಾಯ್ದುಕೊಂಡು ಸರತಿ ಸಾಲಿನಲ್ಲಿ ನಿಂತು ಆಹಾರ ಪಡೆದರು.

ಇದೇ ಸಂದರ್ಭ ನಗರ ಕಾಂಗ್ರೆಸ್ ಅಧ್ಯಕ್ಷರಾದ ಆರ್ ಮೂರ್ತಿ ,ನಾಗರತ್ನ, ಸುರೇಶ್,ಗಣೇಶ್ ,ರಾಮು, ಪರಮೇಶ್, ಪುನೀತ್, ಶೇಖರ್, ಬಾಬು, ಮಹೇಂದ್ರ, ರಂಜನ್, ಗುಣಶೇಖರ್, ವಿಶ್ವ, ರಮೇಶ್ ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: