ಮೈಸೂರು

ಕೊರೋನಾ ಹಿನ್ನೆಲೆ : ಡಿಸಿಸಿ ಟಾಸ್ಕ್ ಪೋರ್ಸ್ ನ  ಪ್ರಥಮ ಸಭೆ ; ಪ್ರಮುಖ ನಿರ್ಣಯಗಳ ಅಂಗೀಕಾರ

ಮೈಸೂರು,ಏ.2:- ಮೈಸೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ವತಿಯಿಂದ  ಕೆಪಿಸಿಸಿ ಅಧ್ಯಕ್ಷರಾದ   ಡಿ ಕೆ ಶಿವಕುಮಾರ್ ಅವರ ನಿರ್ದೇಶನದಂತೆ   ಮೈಸೂರಿನ ಇಂದಿರಾಗಾಂಧಿ ಕಾಂಗ್ರೆಸ್ ಭವನದಲ್ಲಿಂದು  ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ   ಡಾ.ಬಿ ಜೆ ವಿಜಯ್ ಕುಮಾರ್ ಅವರ ಅಧ್ಯಕ್ಷತೆಯಲ್ಲಿ  ಡಿಸಿಸಿ ಟಾಸ್ಕ್ ಪೋರ್ಸ್ ನ  ಪ್ರಥಮ ಸಭೆಯು ಜರುಗಿತು. ಸಭೆಯಲ್ಲಿ ಮುಕ್ತ  ಚರ್ಚೆಗೆ ಅವಕಾಶ ಕಲ್ಪಿಸಿ , ಚರ್ಚಿಸಿದ ನಂತರ ಪ್ರಮುಖ ನಿರ್ಣಯಗಳನ್ನು ಕೈಗೊಂಡು ಅಂಗೀಕರಿಸಲಾಯಿತು.

ಮೈಸೂರ್  ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಎಲ್ಲಾ ಎಂಟು ವಿಧಾನಸಭಾ ಕ್ಷೇತ್ರಗಳಲ್ಲಿ   ಟಾಸ್ಕ್ ಪೋರ್ಸ್ ರಚಿಸುವುದು.( ಈ ಟಾಸ್ಕ್ ಪೋರ್ಸ್ ನಲ್ಲಿ ಶಾಸಕರು ಅಥವಾ ಪರಾಜಿತರು  ಬ್ಲಾಕ್ ಅಧ್ಯಕ್ಷರು ಹಾಗೂ 15 ಸದಸ್ಯರು ಇರಬೇಕು ಹಾಗೂ ಕನಿಷ್ಠ ಎರಡು ಸಹಾಯವಾಣಿ ಸಂಖ್ಯೆಗಳನ್ನು ಸಾರ್ವಜನಿಕರಿಗೆ ತಲುಪುವಂತೆ ಪ್ರಕಟಿಸಬೇಕು )  ಜಿಲ್ಲಾ ಮಟ್ಟದಲ್ಲಿ ಎರಡು ಸಹಾಯವಾಣಿ ರಚನೆ 8296769577, 9741392799, ಕೆಪಿಸಿಸಿ ನಿಯೋಜಿತ ಶಾಸಕರಾದ   ಮಂಜುನಾಥ್ ಹಾಗೂ ಡಿಸಿಸಿ ಅಧ್ಯಕ್ಷರಾದ ಡಾ. ಬಿ ಜೆ ವಿಜಯ್ ಕುಮಾರ್ ನೇತೃತ್ವದಲ್ಲಿ  ಜಿಲ್ಲಾ ಮಟ್ಟದ ಟಾಸ್ಕ್ ಪೋರ್ಸ್ ರಚನೆ. ಡಿಸಿಸಿ ಯ  ಪ್ರಮುಖ ಪದಾಧಿಕಾರಿಗಳು ಕಾರ್ಯ ನಿರ್ವಹಿಸುವುದು. ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಜಿಲ್ಲಾ  ಪಂಚಾಯಿತಿ ಸದಸ್ಯರು 10, 000  , ತಾಲೂಕು ಪಂಚಾಯಿತಿ ಸದಸ್ಯರು 5.000  , ನಗರ ಸಭೆ ಹಾಗೂ ಪುರಸಭೆ ಸದಸ್ಯರು 2500 ರೂಪಾಯಿಗಳನ್ನು   ಕೆಪಿಸಿಸಿ  ರಿಲೀಫ್ ಫಂಡ್ A/c  0788101056855. ಕೆನರಾ ಬ್ಯಾಂಕ್, ಬೆಂಗಳೂರು, IFSC CODE.CNRB0000788  ಚೆಕ್ ಅಥವಾ ಡಿ ಡಿ ಯನ್ನು  ಸಂಬಂಧಿಸಿದ ಬ್ಲಾಕ್ ಅಧ್ಯಕ್ಷರ ಮೂಲಕವೇ ತಲುಪಿಸುವುದು. (ಆಸಕ್ತ ಜಿಲ್ಲಾ ಕಾಂಗ್ರೆಸ್ ಪದಾಧಿಕಾರಿಗಳು ಸಹ ಕೆಪಿಸಿಸಿ  ವಿಪತ್ತು ನಿಧಿಗೆ ದೇಣಿಗೆ ನೀಡಬಹುದಾಗಿದೆ)

ಕೊರೋನಾ ನಿರ್ವಹಣೆಯಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು  ತೆಗೆದುಕೊಂಡಿರುವ ನಿರ್ಧಾರಗಳಲ್ಲಿ ಕೆಲವು ಸಮರ್ಪಕವಾಗಿ ಜಾರಿಗೆಯಾಗಿದೆ, ಕೆಲವು  ವಿಫಲಗೊಂಡಿವೆ , ಅಂತಹ ವಿಫಲತೆಗಳನ್ನು ಗುರುತಿಸಿ ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಸಮಿತಿಯು  ಕೇಂದ್ರ ಹಾಗೂ ರಾಜ್ಯ ಸರ್ಕಾರದ  ಗಮನಕ್ಕೆ ತರುವುದು. ಚೆಕ್ ಅಥವಾ ಡಿ ಡಿ ನೀಡುವವರು   ಚೆಕ್ ಅಥವಾ ಡಿ ಡಿ ನೀಡುವವರು ಕೆಪಿಸಿಸಿ ರಿಲೀಫ್ ಫಂಡ್,  ಹೆಸರಿನಲ್ಲಿ ನೀಡಬೇಕು. ಹೆಲ್ಪ್ ಲೈನ್ ಗೆ ಬರುವ ಕರೆಗಳನ್ನು ಸ್ವೀಕರಿಸಿ , ಸಂಬಂಧಿಸಿದ ತಹಶೀಲ್ದಾರ್ ಅಥವಾ ಜಿ.ಪಂ , ತಾ.ಪಂ ಸದಸ್ಯ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸುವುದು.  ಡಿ ಡಿ ಮತ್ತು ಚೆಕ್ ಗಳನ್ನು ಬ್ಲಾಕ್ ಅಧ್ಯಕ್ಷರೇ ಸ್ವೀಕರಿಸಬೇಕು. ಕೆಪಿಸಿಸಿ ನೀಡುವ ಸೂಚನೆಗಳನ್ನು ಕ್ರಮಬದ್ಧವಾಗಿ ಪಾಲಿಸುವುದು. ಅನಗತ್ಯ ರಾಜಕಾರಣ ಮತ್ತು ಟೀಕೆಗೆ ಆಸ್ಪದ ನೀಡದೆ,  ದೇಶದ ಒಳಿತಿಗೆ ಸರ್ವರೂ  ದುಡಿಯುವುದರ ಕುರಿಉ ಸಭೇಯಲ್ಲಿ ಒಮ್ಮತದ ನಿರ್ಣಯ ಕೈಗೊಳ್ಳಲಾಯಿತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: