ಮೈಸೂರು

ಕೊರೋನಾ ವೈರಸ್ ವಿರುದ್ಧ ಕ್ರಿಮಿನಾಶಕ ಸಿಂಪಡಣೆ

ಮೈಸೂರು,ಏ.2:- ಕೊರೊನಾ ಸೋಂಕು ಮೈಸೂರು ಜಿಲ್ಲೆಯಲ್ಲಿ ವ್ಯಾಪ್ತಿಸುತ್ತಿರುವ ಹಿನ್ನೆಲೆಯಲ್ಲಿ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಚಾಮುಂಡೇಶ್ವರಿ ಕ್ಷೇತ್ರದ   ಶಾಸಕ   ಜಿ.ಟಿ.ದೇವೇಗೌಡರ ನಿರ್ದೇಶನದ ಮೇರೆಗೆ ಮೂಡಾ ವತಿಯಿಂದ  ಇಂದು  ಗೆಜ್ಜಗಳ್ಳಿ, ಬಂಡಿಪಾಳ್ಯ, ಹೊಸಹುಂಡಿ, ಗುಡಮಾದನಹಳ್ಳಿ, ಏಳಿಗೆಹುಂಡಿ,   ಕೊಪ್ಪಲೂರು, ಗೊರೂರು, ಮಹದೇವಪುರ, ರಾಮಬಾಯಿನಗರ, ಮುನಿಸ್ವಾಮಿನಗರ, ನರ್ಮ್  ಕಾಲೋನಿ, ಡಾ.ಬಿ.ಆರ್. ಅಂಬೇಡ್ಕರ್ ಕಾಲೋನಿ  ಮತ್ತು ನವೋದಯ ಬಡಾವಣೆಗಳಲ್ಲಿ ರಾಸಾಯನಿಕ ಸಿಂಪಡಿಸಿದರು, ಸ್ಪ್ರೇ ಮತ್ತು ಬ್ಲೀಚಿಂಗ್ ಪೌಡರ್ ಅನ್ನು ಮೂಡಾ ಮತ್ತು ಅಗ್ನಿಶಾಮಕ‌ ಇಲಾಖೆ ಜೊತೆಗೂಡಿ ಸಿಂಪಡಿಸಿದರು.

ಇದೇ ವೇಳೆ ರೆಡ್ ಜೋನ್ ಆಗಿರುವ ನಂಜನಗೂಡು ನಗರದಲ್ಲಿ  ಕೊರೋನಾ ವೈರಸ್ ನ್ನು ಓಡಿಸಲು ಅಗ್ನಿಶಾಮಕದಳದವರು ನಗರದ ಪ್ರಮುಖ ರಸ್ತೆಗಳಲ್ಲಿ ಕ್ರಿಮಿನಾಶಕವನ್ನು ಸಿಂಪಡಿಸುತ್ತಿರುವುದು ಕಂಡು ಬಂತು.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: