ಮೈಸೂರು

ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸಿದ ಕುಂಚ ಕಲಾವಿದರು

ಮೈಸೂರು,ಏ.2:- ಮೈಸೂರಲ್ಲಿ ಕುಂಚ ಕಲಾವಿದರು ಕೊರೋನಾ ವೈರಸ್ ಕುರಿತು ಜಾಗೃತಿ ಮೂಡಿಸಿದರು. ಬೃಹತ್ ಕೊರೋನಾ ಚಿತ್ರವನ್ನು ಮೈಸೂರು ಬೆಂಗಳೂರು ಮುಖ್ಯ ರಸ್ತೆಯಲ್ಲಿ ಬರೆದು ಜಾಗೃತಿ ಮೂಡಿಸಿದರು.
ಮನೆಯಲ್ಲಿರಿ’ ಆರೋಗ್ಯವಾಗಿರಿ ಎಂದು ಮನವಿ ಮಾಡುವ ಚಿತ್ರ ರಚಿಸಿದ್ದು, ತೊಲಗು ತೊಲಗು ಕೊರೋನಾ ತೊಲಗು ಎಂದು ಘೋಷಣೆ ಕೂಗಿದರು. ಸುಮಾರು 20ಕ್ಕೂ ಹೆಚ್ಚು ಕಲಾವಿದರಿಂದ ಬೃಹತ್ ಚಿತ್ರ ರಚನೆಯಾಗಿದ್ದು, ಕೊಲಂಬಿಯಾ ಏಷ್ಯಾ ಆಸ್ಪತ್ರೆ ಬಳಿಯ ರಸ್ತೆಯಲ್ಲಿ ಚಿತ್ರ ರಚಿಸಿದರು.ಚಿತ್ರ ರಚನೆ ವೇಳೆ ಕಡ್ಡಾಯವಾಗಿ ಮಾಸ್ಕ್ ಧರಿಸಿರುವುದು ಕಂಡು ಬಂತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: