ಪ್ರಮುಖ ಸುದ್ದಿ

ಬ್ಯಾಂಕ್‍ಗಳು ಬೆಳಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ಕಾರ್ಯ ನಿರ್ವಹಿಸಲಿವೆ

ರಾಜ್ಯ( ಮಡಿಕೇರಿ) ಏ.3:-ಕೊರೊನಾ ವೈರಸ್ ನ ಸೋಂಕು ಹರಡದಂತೆ ಸರಕಾರ ಹಲವಾರು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ. ಈ ಕ್ರಮದ ಒಂದು ಭಾಗವಾಗಿ ಬ್ಯಾಂಕ್‍ಗಳು ಕೂಡ ಸೀಮಿತ ಅವಧಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದವು. ಇದೀಗ ರಾಜ್ಯ ಮಟ್ಟದ ಬ್ಯಾಂಕರ್ ಗಳ ಸಮಿತಿಯು ಸಭೆ ಸೇರಿ ರಾಜ್ಯದಲ್ಲಿ ಕಾರ್ಯನಿರ್ವಹಿಸುತ್ತಿರುವ ಬ್ಯಾಂಕುಗಳ ಸಮಯವನ್ನು ಈ ಮೊದಲಿನಂತೆ ಬೆಳಗ್ಗೆ 10 ರಿಂದ 4 ಗಂಟೆಯವರೆಗೆ ಕಾರ್ಯರೂಪಕ್ಕೆ ತರಲಾಗಿದೆ ಎಂದು ಕೊಡಗು ಜಿಲ್ಲಾ ಮಾರ್ಗದರ್ಶಿ ಬ್ಯಾಂಕ್‍ನ ಮುಖ್ಯ ವ್ಯವಸ್ಥಾಪಕರಾದ ಆರ್.ಕೆ.ಬಾಲಚಂದ್ರ ತಿಳಿಸಿದ್ದಾರೆ.
ಈ ಮೊದಲಿನ ಪ್ರಕಟಣೆಯಂತೆ ರಾಷ್ಟ್ರೀಕೃತ ಮತ್ತು ಗ್ರಾಮೀಣ ಬ್ಯಾಂಕುಗಳ ಗ್ರಾಮೀಣ ಭಾಗದ ಕೆಲವು ಶಾಖೆಗಳು ಏ.2, 4, 7, 9 ಮತ್ತು 13 ರಂದು ಕಾರ್ಯನಿರ್ವಹಿಸುತ್ತವೆ ಎಂದು ತಿಳಿಸಲಾಗಿತ್ತು. ಸರ್ಕಾರದ ಪರಿಷ್ಕೃತ ಆದೇಶದಂತೆ ಏ.3 ರಿಂದ 14 ರ ವರೆಗೆ ಎಲ್ಲಾ ಗ್ರಾಮೀಣ ಭಾಗದ ಶಾಖೆಗಳು ಕಾರ್ಯನಿರ್ವಹಿಸುತ್ತವೆ (ಭಾನುವಾರ, 2ನೇ ಶನಿವಾರ ಹಾಗೂ ಸರಕಾರಿ ರಜಾ ದಿನಗಳನ್ನು ಹೊರತು ಪಡಿಸಿ – ಏ.5 ಭಾನುವಾರ, ಏ.6 ಮಹಾವೀರ ಜಯಂತಿ, ಏ.10 ಗುಡ್ ಫ್ರೈಡೆ ಮತ್ತು ಏ.11 2ನೇ ಶನಿವಾರ, ಏ.12 ಭಾನುವಾರ ಮತ್ತು ಏ.14 ಡಾ.ಅಂಬೇಡ್ಕರ್ ಜಯಂತಿ ಪ್ರಯುಕ್ತ ಬ್ಯಾಂಕಿಗೆ ಸಾರ್ವಜನಿಕ ರಜೆ ಈಗಾಗಲೆ ಘೋಷಿಸಲಾಗಿದೆ) ಎಂದು ಬಾಲಚಂದ್ರ ಮಾಹಿತಿ ನೀಡಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: