ಪ್ರಮುಖ ಸುದ್ದಿ

ಕರಿಕೆ ಗ್ರಾಮಕ್ಕೆ ಹೆಚ್ಚಿನ ಆಹಾರ ಸಾಮಾಗ್ರಿ ನೀಡಲು ಮನವಿ

ರಾಜ್ಯ( ಮಡಿಕೇರಿ) ಏ.3 :- ಕೊರೋನಾ ಸೋಂಕು ತಡೆಗಟ್ಟುವ ನಿಟ್ಟಿನಲ್ಲಿ ಘೋಷಿಸಲಾಗಿರುವ ಲಾಕ್‍ಡೌನ್ ಮತ್ತು ಅಂತರ್ ರಾಜ್ಯ ರಸ್ತೆಗಳ ಸಂಪರ್ಕ ನಿರ್ಬಂಧದಿಂದ ಕೇರಳ ಗಡಿ ಭಾಗದಲ್ಲಿರುವ ಕೊಡಗಿನ ಕರಿಕೆ ಭಾಗದ ಜನರು ಅಗತ್ಯ ವಸ್ತುಗಳ ಕೊರತೆಯಿಂದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈ ಗ್ರಾಮಕ್ಕೆ ಹೆಚ್ಚಿನ ಆಹಾರ ಸಾಮಾಗ್ರಿಗಳನ್ನು ಸರಬರಾಜು ಮಾಡಲು ಕ್ರಮ ಕೈಗೊಳ್ಳಬೇಕೆಂದು ಕರಿಕೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಎನ್.ಬಾಲಚಂದ್ರನ್ ನಾಯರ್ ಅವರು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.
ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿರುವ ಅವರು ಜಿಲ್ಲಾ ಕೇಂದ್ರ ಸ್ಥಾನ ಮಡಿಕೇರಿ 30 ಕಿ.ಮೀ ದೂರದಲ್ಲಿದ್ದು, ಸರ್ಕಾರ ಈ ಸಂಕಷ್ಟದ ಪರಿಸ್ಥಿತಿಯಲ್ಲಿ ನೀಡುವ ಸೌಲಭ್ಯಗಳನ್ನು ಪಡೆಯಲು ಗ್ರಾಮೀಣರಿಗೆ ಸಾಧ್ಯವಾಗುತ್ತಿಲ್ಲ. ಗ್ರಾಮದಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡ ಹಾಗೂ ಕೂಲಿ ಕಾರ್ಮಿಕ ಕುಟುಂಬಗಳು ಹೆಚ್ಚಿನ ಸಂಖ್ಯೆಯಲ್ಲಿದ್ದು, ಕೆಲಸವಿಲ್ಲದೆ ಮನೆಯಲ್ಲೇ ತಂಗಿದ್ದಾರೆ. ಇದರಿಂದ ಆದಾಯವಿಲ್ಲದೆ ಆಹಾರ ಸಾಮಾಗ್ರಿಗಳನ್ನು ಕೊಳ್ಳಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜಿಲ್ಲಾಡಳಿತ ಅಗತ್ಯ ವಸ್ತುಗಳನ್ನು ತುರ್ತಾಗಿ ಕರಿಕೆ ಗ್ರಾಮಕ್ಕೆ ತಲುಪಿಸಬೇಕೆಂದು ಮನವಿ ಮಾಡಿದ್ದಾರೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: