ಮೈಸೂರು

ಸಂಧ್ಯ ಸುರಕ್ಷ ಟ್ರಸ್ಟ್ ವತಿಯಿಂದ ಶ್ರೀರಾಮ ನವಮಿ ಪ್ರಯುಕ್ತ ಪುಳಿಯೋಗರೆ, ಮೊಸರನ್ನ, ಹಣ್ಣು ವಿತರಣೆ

ಮೈಸೂರು,ಏ.2:- ಸರ್ವೇಜನಾಃ ಸುಖಿನೋಭವಂತು ಎಂಬ ಧ್ಯೇಯವುಳ್ಳ ನಗರದ ಸಂಧ್ಯ ಸುರಕ್ಷ ಟ್ರಸ್ಟ್ (ರಿ.), ಜಿಲ್ಲಾ ಬ್ರಾಹ್ಮಣ ಸಭೆ, ಮೈಸೂರು ಮತ್ತು ಕರ್ನಾಟಕ ಬ್ರಾಹ್ಮಣ ಹಿರಿಯ ನಾಗರಿಕ ವೇದಿಕೆ ವತಿಯಿಂದ  ಇಂದು ಶ್ರೀರಾಮ ನವಮಿ ಪ್ರಯುಕ್ತ ಪುಳಿಯೋಗರೆ, ಮೊಸರನ್ನ, ಕಲ್ಲಂಗಡಿ/ಕರ್ಬೂಜಾ ಹಣ್ಣು ವಿತರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಸುಮಾರು ಸಾವಿರ ಜನಕ್ಕೆ ಮಾಡಲಾಗಿದ್ದ ಪ್ರಸಾದವನ್ನು ಅಶೋಕಪುರಂ ಪೊಲೀಸ್ ಠಾಣೆ, ರಾಮಕೃಷ್ಣ ನರ್ಸಿಂಗ್ ಹೋಮ್, ರಾಮನ್ ರಿಸರ್ಚ್ ಸೆಂಟರ್ ಹಾಗೂ ಆಸ್ಪತ್ರೆ, ಚಾಮುಂಡಿಪುರಂ ಸರ್ಕಲ್, ಎ.ಟು.ಜೆಡ್ ಕಾರ್ನರ್, ಆಂದೋಲನ ಸರ್ಕಲ್, ವಿವೇಕಾನಂದ ಸರ್ಕಲ್ ನಲ್ಲಿ ಇದ್ದ ಜನರಿಗೆ ಟ್ರಸ್ಟಿನ ಮುಖ್ಯಸ್ಥರಾದ ಡಾ. ಬಿ. ಆರ್. ನಟರಾಜ ಜೋಯಿಸ್ ಅವರ ನೇತೃತ್ವದಲ್ಲಿ ವಿತರಿಸಲಾಯಿತು.

ಟ್ರಸ್ಟಿಗಳಾದ ಕೇಂದ್ರ ಉಗ್ರಾಣ ನಿಗಮದ ರಾಜ್ಯ ನಿರ್ದೇಶಕರಾದ ಸಿರಿ ಚಾನೆಲ್ಲಿನ ಡಾ.ಜಿ.ರವಿ ಅವರಿಗೆ ಜೋಯಿಸರು ಕೃತಜ್ಞತೆ ವ್ಯಕ್ತ ಪಡಿಸಿದರು. ತಮ್ಮ ಜೊತೆ ಸಹಕರಿಸುತ್ತಿರುವ  ಸುಶೀಲ, ಜಿ.ಆರ್.ವಿದ್ಯಾರಣ್ಯ, ಸ್ವಾಮಿನಾಥನ್, ರಾಘವೇಂದ್ರ, ರವಿ, ಉದಯ್, ಆನಂದ್ ಸಾರ್, ವೆಂಕಟರಾಮ್ ಅವರಿಗೆ ಧನ್ಯವಾದಗಳನ್ನು ಅರ್ಪಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: