ಮೈಸೂರು

ಡಯಾಲಿಸಿಸ್ ಮಾಡಿಸುವವರಿಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ : ಶಾಸಕ ಎಸ್.ಎ.ರಾಮದಾಸ್

ಮೈಸೂರು,ಏ.2:-    ಪ್ರತಿನಿತ್ಯ ಸಂಜೆ 6  ರಿಂದ 6.30 ರವರೆಗೆ ಮೈಸೂರಿನ ಸಾರ್ವಜನಿಕರ ಹಿತದೃಷ್ಟಿಯಿಂದ ಡಿಜಿಟಲ್ ಟೆಕ್ನಾಲಜಿಯನ್ನು ಬಳಸಿಕೊಂಡು ಫೇಸ್ ಬುಕ್ ಲೈವ್ ಮೂಲಕ ಸಾರ್ವಜನಿಕರ ಅಹವಾಲುಗಳನ್ನು, ತೊಂದರೆಗಳನ್ನು ಆಲಿಸಿ ಸಲಹೆ, ಸೂಚನೆ ಮತ್ತು ಸೂಕ್ತ ಪರಿಹಾರಗಳನ್ನು ಶಾಸಕ ಎಸ್.ಎ.ರಾಮದಾಸ್  ನೀಡುತ್ತಿದ್ದರು.  ಈ ವಾರದಲ್ಲಿ ಎರಡು ದಿವಸ ಡಯಾಲಿಸಿಸ್ ಗೆ ಹೋಗುವಂತವರಿಗೆ ಕಳೆದ ಹತ್ತು ಹನ್ನೆರಡು ದಿವಸಗಳಿಂದ ಆಟೋ, ಕಾರು ಹೀಗೆ ಯಾವುದೇ ವಾಹನಗಳು ಸಿಗದೇ ಡಯಾಲಿಸಿಸ್ ಹೋಗಲು ಸಾಧ್ಯವಾಗಿಲ್ಲ, ತಾವು ಇದಕ್ಕೆ ಸೂಕ್ತ ಪರಿಹಾರವನ್ನು ನೀಡಿ ಎಂದು ಜನತೆ ಶಾಸಕರಲ್ಲಿ ಮನವಿ ಮಾಡಿದ್ದರು.

ಈ ವಿಚಾರವನ್ನು ಆಲೋಚಿಸಿ ಇಂದು ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಯಲ್ಲಿ ವಾಸವಾಗಿರುವಂತಹ ವ್ಯಕ್ತಿಗಳು ಡಯಾಲಿಸಿಸ್ ಗೆ ಹೋಗಬೇಕಾದಂತಹವರು, ಯಾರು ನೋಂದಣಿ ಮಾಡಿಕೊಂಡಿರುತ್ತಾರೋ ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿ ಡಯಾಲಿಸಿಸ್ ಆದ ನಂತರ ಮನೆಗೆ ಬಿಡುವಂತಹ ವ್ಯವಸ್ಥೆಯನ್ನು ಮಾಡುವ ಸಲುವಾಗಿ ಆಸರೆ ಮತ್ತು ಲೆಟ್ ಅಸ್ ಡೂ ಇಟ್ ನ ಮೂಲಕ ಎರಡು ಆಂಬುಲೆನ್ಸ್ ನ್ನು ಉಚಿತವಾಗಿ ನೀಡಲು ವ್ಯವಸ್ಥೆ ಮಾಡಲಾಗಿದ್ದು ಇಂದು ಚಾಲನೆಯನ್ನು ನೀಡಿದರು.

0821 – 4001100 ಈ ಸಂಖ್ಯೆಗೆ ಯಾರು ಕರೆ ಮಾಡಿ ಸಹಾಯ ಬೇಕೆಂದು ತಿಳಿಸಿದವರಿಗೆ, ಉಚಿತವಾಗಿ ಸೇವೆಯನ್ನು ಮಾಡುತ್ತೇವೆ. ಇಂದು ನಮ್ಮಲ್ಲಿ ನೋಂದಣಿ ಮಾಡಿಕೊಂಡವಂತ ಒಬ್ಬರು ನಾಳೆ ಬೆಳಿಗ್ಗೆ 10 ಗಂಟೆಗೆ ವಿದ್ಯಾರಣ್ಯಪುರಂ ನಿಂದ ಜೆ,ಎಸ್,ಎಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಿದ್ದಾರೆ. ಗರ್ಭಿಣಿ ಸ್ತ್ರೀಯರಿಗೂ ಸಹ ಈ ಸೇವೆಯನ್ನು ಉಚಿತವಾಗಿ ನೀಡುವ ವ್ಯವಸ್ಥೆಯನ್ನು ಮಾಡಿರುತ್ತೇವೆ.

ಈಗಾಗಲೇ   ವಿದೇಶದಿಂದ ಬಂದಿರುವಂತಹವರಲ್ಲಿ ಎರಡು ಮಾತ್ರ ಪಾಸಿಟಿವ್ ಕೇಸ್ ಇದ್ದವು, ಉಳಿದಂತಹ ಕ್ವಾರೆಂಟೈನ್ ನಲ್ಲಿದ್ದಂತಹವರಲ್ಲಿ ಬಹಳ ಜನ ಈಗಾಗಲೇ ಅಂದರೆ ಸುಮಾರು 800 ಜನಕ್ಕೂ ಹೆಚ್ಚು ಜನಕ್ಕೆ ನೆಗೆಟಿವ್ ಆಗಿದೆ, ಆದರೆ ಒಂದು ಕೈಗಾರಿಕೆಯಿಂದ ಪ್ರಾರಂಭವಾದ ಸಮಸ್ಯೆ ನಮ್ಮೆಲ್ಲರಿಗೂ ಚಿಂತನೆಯನ್ನು ತಂದುಕೊಟ್ಟಿದೆ. ಈ ದೃಷ್ಟಿಯಲ್ಲಿ ಜಿಲ್ಲಾಡಳಿತ ತನ್ನದೇ ಆದಂತಹ ಕ್ರಮಗಳನ್ನು ಕೈಗೊಳ್ಳುತ್ತಿದೆ, ಹಾಗಾಗಿ ವೈರಸ್ ನ್ನು ನಿಯಂತ್ರಿಸುವುದು ಮತ್ತು ವೈರಸ್ ಇರುವ ವ್ಯಕ್ತಿಗಳನ್ನು ಸಂಪರ್ಕಿಸಿರುವ ವ್ಯಕ್ತಿಗಳಿಗೆ ಏನೇನು ಆಗಿದೆ ಎಂದು ತಿಳಿಯುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ಜನರಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತಿದ್ದೇವೆ ದಯಮಾಡಿ ಹೊರಗೆ ಬರಬೇಡಿ, ಬಂದು ರೋಗವನ್ನು ಮನೆಗೆ ತೆಗೆದುಕೊಂಡು ಹೋಗಬೇಡಿ, ಅನಾವಶ್ಯಕವಾದಂತಹ ಓಡಾಟ ಮಾಡಬೇಡಿ, ಎಂದು ಶಾಸಕರು ಸಾರ್ವಜನಿಕರಲ್ಲಿ ಮನವಿ ಮಾಡಿದರು.

ಇದರ ಜೊತೆಗೆ ಅನಾವಶ್ಯಕವಾಗಿ ಓಡಾಡುವವರ ವಾಹನಗಳನ್ನು ಜಪ್ತಿ ಮಾಡಿ, ಅವರ ಮೇಲೆ ಕೇಸ್ ಹಾಕಿ ನಿಯಂತ್ರಣ ಮಾಡಬೇಕೆಂದು ಪೊಲೀಸ್ ಇಲಾಖೆಗೆ ಹೇಳುತ್ತಿದ್ದೇನೆ.  ಮೈಸೂರನ್ನು ಆರೋಗ್ಯವಾಗಿ ಇಡೋಣ, ವೈರಸ್ ನ್ನು ಮತ್ತೆ ಮತ್ತೆ ಬೇರೆಯವರಿಗೆ ಹರಡದಂತೆ ನೋಡಿಕೊಳ್ಳೋಣ ಎಂದು ಜನರಲ್ಲಿ ಮನವಿ ಮಾಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: