ಮೈಸೂರು

ವಾರದಲ್ಲಿ ಮೂರು ದಿನ ಕೋಳಿ ಮಾಂಸ ಮಾರಾಟಕ್ಕೆ ಅನುಮತಿ

ಮೈಸೂರು, ಏ.3:-   ನಗರದ ಕೆಲವು ಭಾಗಗಳಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡ  ಹಿನ್ನೆಲೆಯಲ್ಲಿ   ಮೈಸೂರು ಜಿಲ್ಲೆಯಲ್ಲಿ  ಮಾಂಸ ಮಾರಾಟಕ್ಕೆ ತಾತ್ಕಾಲಿಕ  ನಿಷೇಧ ಹೇರಲಾಗಿತ್ತು. ಇದೀಗ ಮಾಂಸ ಮಾರಾಟಕ್ಕೆ ಚಾಲನೆ ನೀಡಲಾಗುತ್ತಿದೆ.  ಇದೀಗ ಆ ನಿಷೇಧವನ್ನು ತೆರವುಗೊಳಿಸಲಾಗಿದ್ದು, ಕೋಳಿ ಮಾಂಸ ಮಾರಾಟಕ್ಕೆ ಮತ್ತೆ ಅನುಮತಿ ನೀಡಲಾಗಿದೆ.

ಕಳೆದ ತಿಂಗಳು ಮಾರ್ಚ್ 16ರಂದು ಮೈಸೂರಿನ ಕುಂಬಾರಕೊಪ್ಪಲು ವ್ಯಾಪ್ತಿಯಲ್ಲಿ ಹಕ್ಕಿಜ್ವರ ಕಾಣಿಸಿಕೊಂಡಿತ್ತು. ಹೀಗಾಗಿ, ಕೋಳಿ ಮಾಂಸ ಮಾರಾಟವನ್ನು ತಾತ್ಕಾಲಿಕವಾಗಿ ರದ್ದುಗೊಳಿಸಲಾಗಿತ್ತು. ಮಾರ್ಚ್ 28ರಿಂದ ಸದರಿ ಪ್ರದೇಶದಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದಿಲ್ಲ ಎಂದು ಪಶುಪಾಲನಾ ಇಲಾಖೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.ಹಾಗಾಗಿ ಮೈಸೂರು ಮಹಾ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಇನ್ನು ಮುಂದೆ ವಾರದಲ್ಲಿ 3 ದಿನ ಅಂದರೆ ಮಂಗಳವಾರ, ಶುಕ್ರವಾರ, ಭಾನುವಾರದಂದು ಬೆಳಿಗ್ಗೆ 6 ರಿಂದ ಸಂಜೆ 6 ಗಂಟೆವರೆಗೆ ಕೋಳಿ ಮಾಂಸ ಮಾರಾಟ ಮಾಡಲು ಅನುಮತಿ ನೀಡಲಾಗಿದೆ. ನಗರಪಾಲಿಕೆ ಆಯುಕ್ತರು ಹೊರಡಿಸಿರುವ ಈ ಪ್ರಕಟಣೆ  ಮಾಂಸಪ್ರಿಯರಲ್ಲಿ  ಸಂತಸ ಮೂಡಿಸಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: