ಮೈಸೂರು

ಹೋಂ ಕ್ವಾರಂಟೈನ್‍ಗೆ ಒಳಗಾದವರನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸ ಬೇಕೆಂದು ಒತ್ತಾಯಿಸಿ ಪ್ರತಿಭಟನೆ : ಸ್ಪಂದಿಸಿದ ಸಂಸದ ಪ್ರತಾಪ್ ಸಿಂಹ

ಮೈಸೂರು,ಏ.3:-  ವಸತಿಗೃಹ ವೊಂದರಲ್ಲಿ ಹೋಂ ಕ್ವಾರಂಟೈನ್‍ಗೆ ಒಳಗಾದವರನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸ ಬೇಕೆಂದು ಒತ್ತಾಯಿಸಿ ದೇವರಾಜ ಮೊಹಲ್ಲಾ ನಿವಾಸಿಗಳು ನಿನ್ನೆ ರಾತ್ರಿ ಪ್ರತಿಭಟನೆ ನಡೆಸಿದರು.

ನಾರಾಯಣಶಾಸ್ತ್ರಿ ರಸ್ತೆಯ ಸಂಗೀತ ವಸತಿ ಗೃಹದ ಬಳಿ ಜಮಾವಣೆಗೊಂಡ ನೂರಾರು ಮಂದಿ ನಿವಾಸಿಗಳು, ಜಿಲ್ಲಾಡಳಿತದ ವಿರುದ್ಧ ಧಿಕ್ಕಾರ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು.

ಈ ಬಡಾವಣೆಯಲ್ಲಿ ವೃದ್ಧರು, ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಆದರೆ, ಹೋಂ ಕ್ವಾರಂಟೈನ್‍ಗೆ ಒಳಗಾಗಿರುವ ನಂಜನ ಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯ ನಾಲ್ವರು ಸೇರಿದಂತೆ 40 ಮಂದಿಯನ್ನು ಸೀಬಯ್ಯ ರಸ್ತೆಯಲ್ಲಿರುವ ವೈಶಾಖ್ ವಸತಿ ಗೃಹದಲ್ಲಿ ಇರಿಸಿದ್ದಾರೆ. ಇದರಿಂದ ಕೊರೋನಾ ಸೋಂಕು ಹರಡುವ ಭೀತಿ ಎದುರಾಗಿದ್ದು, ಕೂಡಲೇ ಬೇರೆಡೆಗೆ ಸ್ಥಳಾಂತರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದರು.

ವಿಷಯ ತಿಳಿಯುತ್ತಿದ್ದಂತೆ  ಸಂಸದ ಪ್ರತಾಪಸಿಂಹ, ಶಾಸಕ ಎಲ್.ನಾಗೇಂದ್ರ, ಮಾಜಿ ಮೇಯರ್ ರವಿಕುಮಾರ್ ಸ್ಥಳಕ್ಕೆ ಭೇಟಿ ನೀಡಿ, ವಸತಿ ಗೃಹದಲ್ಲಿರುವವರನ್ನು  ಏ.3ರಂದು ಬೆಳಿಗ್ಗೆ ಸ್ಥಳಾಂತರಿಸುವುದಾಗಿ ನಿವಾಸಿಗಳ ಮನ ವೊಲಿಕೆಗೆ ಯತ್ನಿಸಿದರು. ಆದರೆ, ಇದಕ್ಕೆ ಒಪ್ಪದ ನಿವಾಸಿಗಳು ಈಗಲೇ ಸ್ಥಳಾಂತರಿಸ ಬೇಕೆಂದು ಪಟ್ಟು ಹಿಡಿದ  ಹಿನ್ನೆಲೆ ಯಲ್ಲಿ ಸಂಸದ ಪ್ರತಾಪಸಿಂಹ  ರಾತ್ರಿ 11 ಗಂಟೆಯೊಳಗೆ ಬೇರೆಡೆಗೆ ಸ್ಥಳಾಂತರಿಸುವುದಾಗಿ ಭರವಸೆ ನೀಡಿದರು. ರಾತ್ರಿ 11 ಗಂಟೆಯೊಳಗೆ ಸ್ಥಳಾಂತರಿಸ ದಿದ್ದರೆ ಉಗ್ರ ಪ್ರತಿಭಟನೆ ಮಾಡುವುದಾಗಿ ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದರು. ರಾತ್ರಿಯೇ ಅವರನ್ನು ಮೈಸೂರಿನ ಹೊರವಲಯದಲ್ಲಿನ ಸ್ಥಳಕ್ಕೆ ಸ್ಥಳಾಂತರಿಸಿದರು.

ಅಹಿತಕರ ಘಟನೆಗಳು ನಡೆಯದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್  ಮಾಡಲಾಗಿತ್ತು.   ಈ ವೇಳೆ ಪೊಲೀಸರು ಗುಂಪಾಗಿ ನಿಲ್ಲದೆ ಅಂತರ ಕಾಯ್ದುಕೊಳ್ಳು ವಂತೆ ನಿವಾಸಿಗಳಲ್ಲಿ ಮನವಿ ಮಾಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: