ಮೈಸೂರು

ನಗರದಲ್ಲಿ ಸದ್ಯಕ್ಕೆ ಬೇಕರಿ ಗಳನ್ನು ತೆರೆಯುವುದು ಬೇಡ : ಯೂ ಟರ್ನ್ ಹೊಡೆದ ಪಾಲಿಕೆ

ಮೈಸೂರು,ಏ.3:-  ಬೆಡ್, ಬನ್ ಅಗತ್ಯ ಬೇಡಿಕೆಯ ವಸ್ತುಗಳಾಗಿದ್ದು,  ಬೇಕರಿ ಗಳನ್ನು ಬಂದ್ ಮಾಡುವಂತೆ ತಾವು ತಿಳಿಸಿಲ್ಲ ಎಂದಿದ್ದ ಪಾಲಿಕೆ   ನಗರದಲ್ಲಿ ಸದ್ಯಕ್ಕೆ ಬೇಕರಿ ಗಳನ್ನು ತೆರೆಯುವುದು ಬೇಡ ಎಂದು   ಪ್ರಕಟಣೆ ಹೊರಡಿಸಿದೆ.

ಬೇಕರಿಗಳು ಬಾಗಿಲು ತೆರೆದು ಮಾರಾಟ ನಡೆಸಲು ಅವಕಾಶ ಮಾಡಿಕೊಡಲಾಗು ವುದು ಎಂದು ಬುಧವಾರ ಪ್ರಕಟಿಸಿದ್ದ ಪಾಲಿಕೆ ಒಂದೇ ದಿನದಲ್ಲಿ ಯುಟರ್ನ್ ಹೊಡೆದಿದೆ.

ಬುಧವಾರ ಪತ್ರಿಕಾಗೋಷ್ಠಿ ನಡೆಸಿದ್ದ ಪಾಲಿಕೆ  ಮ  ಮೇಯರ್ ತಸ್ನೀಂ  ಲಾಕ್‍ಡೌನ್‍ನಲ್ಲಿ ಮನೆಯೊಳಗೇ ಉಳಿದಿರುವ ಜನರಿಗೆ ಬೇಕರಿಗಳು ಬ್ರೆಡ್, ಬನ್ ಮೊದಲಾದ ತಿನಿಸುಗಳನ್ನು ಒದಗಿಸಬಹುದು ಎಂದಿದ್ದರು. ಹಾಗಾಗಿ ಗುರುವಾರ ನಗರದ ವಿವಿಧೆಡೆಯ ಬಹಳಷ್ಟು ಬೇಕರಿಗಳು ಬಾಗಿಲು ತೆರೆದಿದ್ದವು. ನಗರದ ಹೃದಯ ಭಾಗದ ಬೇಕರಿಗಳು ಮಾತ್ರ ಬಾಗಿಲು ತೆರೆದಿರಲಿಲ್ಲ. ಮಾ.24ರಂದು ದೇಶಾದ್ಯಂತ ಲಾಕ್‍ಡೌನ್ ಘೋಷಣೆಯಾದ ಬೆನ್ನಲ್ಲೇ ಬೇಕರಿಗಳೂ ಸಹ ಬಾಗಿಲು ಬಂದ್ ಮಾಡಿದ್ದವು. ಹೋಟೆಲ್‍ಗಳೆಲ್ಲವೂ ಬಂದ್ ಆಗಿರುವುದರಿಂದ ಬೇಕರಿಗಳು ಬಾಗಿಲು ತೆರೆದರೆ ಜನರ ಅನುಕೂಲವಾಗಲಿದೆ ಎಂಬುದು ಪಾಲಿಕೆಯ ಚಿಂತನೆಯಾಗಿತ್ತು ಆದರೆ ನಿನ್ನೆ ಸಂಜೆ ಪ್ರಕಟಣೆ ಹೊರಡಿಸಿದ ಪಾಲಿಕೆ ನಗರದಲ್ಲಿ ಸದ್ಯಕ್ಕೆ ಬೇಕರಿ ಗಳನ್ನು ತೆರೆಯುವುದು ಬೇಡ ಎಂದಿದ್ದು, ಬೇಕರಿ ಮಾಲೀಕರಲ್ಲಿ ನಿರಾಸೆ ಮೂಡಿಸಿದೆ.

ಪಾಲಿಕೆಯ ಆಯುಕ್ತರಾದ ಗುರುದತ್ ಹೆಗಡೆ ಹೊರಡಿಸಿರುವ ಪ್ರಕಟಣೆಯಲ್ಲಿ ಹೇಳಿದಿರೋದಿಷ್ಟೇ. ಸಾರ್ವಜನಿಕರಿಗೆ ಬ್ರೆಡ್, ಬನ್, ಬಿಸ್ಕೆಟ್, ದೊರೆಯುವ ಉದ್ದೇಶದಿಂದ  ಬೇಕರಿ ಉದ್ದಿಮೆಗಳನ್ನು ತೆರೆಯುವ ಬಗ್ಗೆ ಏ.1ರಂದು ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಲಾಗಿತ್ತು. ಆದರೆ ಈ ರೀತಿ ಬೇಕರಿ ಅಂಗಡಿಗಳನ್ನು ತೆರೆದರೆ ನಗರದಲ್ಲಿ ಜನದಟ್ಟಣೆ ಹೆಚ್ಚಾಗುವ ಕಾರಣ ಸಾರ್ವಜನಿಕರ ಹಿತದೃಷ್ಟಿಯಿಂದ ಬೇಕರಿ ಅಂಗಡಿಗಳನ್ನು ತೆರೆಯುವುದು ಬೇಡವೆಂದು ಜಿಲ್ಲಾ ಉಸ್ತುವಾರಿ ಸಚಿವರು ಸೂಚಿಸಿದ್ದು, ಸಚಿವರೇ ನಿರ್ದೇಶನ ನೀಡಿದಂತೆ ಬೇಕರಿ ಅಂಗಡಿ ತೆರೆಯುವ ಬದಲು ಬೇಕರಿಯವರು ಬ್ರೆಡ್, ಬನ್ ತಯಾರಿಸಿ ಹತ್ತಿರದ ದಿನಸಿ, ಅಂಗಡಿಗಳಿಗೆ, ಸೂಪರ್ ಮಾರ್ಕೆಟ್ ಗಳಿಗೆ ಕೆ.ಎಂ.ಎಫ್ ಔಟ್ ಲೆಟ್ ಮತ್ತು ಮಿಲ್ಕ್ ಡೈರಿ ಔಟ್ ಲೆಟ್ ಗಳಿಗೆ ನೀಡಲು ಅವಕಾಶ ಕಲ್ಪಿಸಲಾಗಿದೆ. ಈ ರೀತಿ ಮಾಡುವುದಕ್ಕೆ ಯಾವುದೇ ರೀತಿಯ ನಿರ್ಬಂಧ ಇರುವುದಿಲ್ಲ. ಆದರೆ ಮೈಸೂರು ನಗರದಲ್ಲಿ  ಬೇಕರಿ ಅಂಗಡಿ ತೆರೆಯುವುದಕ್ಕೆ ಅವಕಾಶವಿಲ್ಲವೆಂದು ಈ ಮೂಲಕ ಸ್ಪಷ್ಟಪಡಿಸಲಾಗಿದೆ ಎಂದಿದ್ದಾರೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: