ಮೈಸೂರು

ಮೈಸೂರಿನಲ್ಲಿ ಇಂದು ಮಾಂಸ ಮಾರಾಟ ಬಲು ಜೋರು : ಮುಗಿ ಬಿದ್ದ ಮಾಂಸ ಪ್ರಿಯರು

ಮೈಸೂರು,ಏ.3:-  ಹಕ್ಕಿ ಜ್ವರದ ಹಿನ್ನೆಲೆಯಲ್ಲಿ  ಹಲವು ದಿನಗಳ ನಂತರ ಇಂದು ಮೈಸೂರು ನಗರದೆಲ್ಲೆಡೆ ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದ್ದು. ಬೆಳ್ಳಂಬೆಳಗ್ಗೆ ಮಟನ್ ಮಾರಾಟ ಜೋರಾಗಿಯೇ ನಡೆದಿದ್ದು, ಮಾಂಸ ಪ್ರಿಯರು ಮಾಂಸ ಖರೀದಿಗೆ ಮುಗಿ ಬಿದ್ದಿದ್ದಾರೆ.

ಹಕ್ಕಿಜ್ವರದ  ಹಿನ್ನೆಲೆಯಲ್ಲಿ  ಚಿಕನ್ ಖರೀದಿಸುವ ಗ್ರಾಹಕರಲ್ಲಿ ಇಳಿಮುಖ ಕಂಡು ಬಂದಿದ್ದು, ಉಸ್ತುವಾರಿ ಸಚಿವ ವಿ ಸೋಮಣ್ಣ ಒಂದು ಕೆಜಿ ಮಟನ್ ಗೆ 500 ರೂ ನಿಗದಿಗೊಳಿಸಿದ್ದರು. 500ರೂ.ಗೆ ಮಟನ್ ಮಾರಾಟಗಾರರು ಮಾಂಸ ಮಾರಾಟ ಮಾಡುತ್ತಿದ್ದು, 500ರೂ ನಿಗದಿ ಮಾಡಿದ್ದರಿಂದ ನಮಗೆ ನಷ್ಟ ಉಂಟಾಗಿದೆ. ಇನ್ನೊಂದು ನೂರು ಸೇರಿಸಿ 600ರೂ. ಮಾಡಿದ್ದರೆ ಸರಿ ಬರುತ್ತಿತ್ತು. ಹಕ್ಕಿಜ್ವರದ ಎಫೆಕ್ಟ್ ನಿಂದ ಕೋಳಿ ಮಾಂಸವನ್ನು ಯಾರೂ ಕೂಡ ಕೇಳುತ್ತಿಲ್ಲ ಎಂದು ಮಟನ್ ಮಾರಾಟಗಾರರು ಹೇಳಿದ್ದಾರೆ.

ನಗರದ ಹಲವೆಡೆ ಹಕ್ಕಿ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಮಾಂಸ ಮಾರಾಟಕ್ಕೆ ನಿಷೇಧ ಹೇರಲಾಗಿತ್ತು. ಇದೀಗ ವಾರದಲ್ಲಿ ಮೂರು ದಿನ ಮಾಂಸ ಮಾರಾಟಕ್ಕೆ ಅವಕಾಶ ಕಲ್ಪಿಸಿ ಅನುಮತಿ ನೀಡಲಾಗಿದೆ.  (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: