ಮೈಸೂರು

ಲಾಡ್ಜ್ ಗಳಲ್ಲಿ ಕ್ವಾರೆಂಟೈನ್ ಮಾಡಲು ಜನರ ವಿರೋಧ : ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಗರಂ

ಮೈಸೂರು,ಏ.3:- ಮೈಸೂರಿನ ಅರಸು ರಸ್ತೆಯಲ್ಲಿನ ಲಾಡ್ಜ್ ಒಂದರಲ್ಲಿ  ಕ್ವಾರೈಂಟೈನ್ ಮಾಡಲು ಸ್ಥಳೀಯರು ಇಂದೂ ಕೂಡ  ವಿರೋಧ ವ್ಯಕ್ತ ಪಡಿಸಿದ ಘಟನೆ ನಡೆಯಿತು. ಈ ಶಾಸಕ ನಾಗೇಂದ್ರ, ಸಂಸದ ಪ್ರತಾಪ್ ಸಿಂಹ ಪೊಲೀಸರು ಸ್ಥಳಕ್ಕೆ ತೆರಳಿ ಪರಿಸ್ಥಿತಿ ತಿಳಿಗೊಳಿಸಲು ಯತ್ನಿಸಿದರು.

ಈ ವಿಷಯಕ್ಕೆ ಸಂಬಂಧಿಸಿದಂತೆ ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಪ್ರತಿಕ್ರಿಯಿಸಿ ನಾವೇನು ಪಿಕ್‌ನಿಕ್ ಗೆ ಹೊರಗೆ ಓಡಾಡ್ತಿಲ್ಲ. ನಿಮ್ಮ ಪ್ರಾಣ ಉಳಿಸಲು ಹೊರಗೆ ಹೋರಾಡುತ್ತಿದ್ದೇವೆ. ಕ್ವಾರೆಂಟೈನ್ ಆಗಿರುವವರಿಗೂ ಕುಟುಂಬ ಮಕ್ಕಳಿದ್ದಾರೆ. ಅವರನ್ನು ಮಾನವೀಯತೆಯಿಂದ ನೋಡಿ. ಒಂದು ಪ್ರಕರಣ ಸ್ಥಳೀಯರ ವಿರೋಧ ಸಹಿಸಬಹುದು. ಆದರೆ ಮುಂದೆ ಇನ್ನೂ ಹೆಚ್ಚಾದರೆ ಸ್ಥಳೀಯರು ಸಹಕಾರ ಕೊಡಲೇಬೇಕು ಎಂದು ಎಚ್ಚರಿಸಿದರು.

ಹೊರಗೆ ಇರೋದು ಅಥವಾ ಕ್ವಾರೆಂಟೈನ್ ಆದವರು ಉದ್ದೇಶಪೂರ್ವಕವಾಗಿ ಹೊರಗಿಲ್ಲ. ಅವರೆಲ್ಲ ಬದುಕಬೇಕು ಅಂತಾನೆ ಕ್ವಾರೆಂಟೈನ್ ಆಗುತ್ತಿದ್ದಾರೆ. ಜನರು ವಿರೋಧ ಮಾಡುವುದಕ್ಕೂ ಮುನ್ನ ಒಮ್ಮೆ ಯೋಚನೆ ಮಾಡಬೇಕು. ನಿಮಗಾಗಿ ನಾವು ಹೊರಗಿದ್ದು ಕೆಲಸ ಮಾಡ್ತಿದ್ದೀವಿ. ಅದನ್ನು  ಅರ್ಥ ಮಾಡಿಕೊಂಡು ಜಿಲ್ಲಾಡಳಿತಕ್ಕೆ ಸಹಕಾರ ನೀಡಿ ಎಂದು ಲಾಡ್ಜ್‌ಗಳಲ್ಲಿ ಕ್ವಾರೆಂಟೈನ್ ಮಾಡಲು ವಿರೋಧ ಮಾಡಿದ್ದಕ್ಕೆ ಗರಂ  ಆದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: