ಮೈಸೂರು

ಎಂ.ಜಿ.ರಸ್ತೆಯ ಮಾರುಕಟ್ಟೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಸೋಡಿಯಂ ಮಿಶ್ರಿತ ದ್ರಾವಣ ಸಿಂಪಡಣೆ

ಮೈಸೂರು,ಏ.3:- ಮೈಸೂರು ಎಂ.ಜಿ.ರಸ್ತೆಯಲ್ಲಿರುವ ತರಕಾರಿ ಮಾರುಕಟ್ಟೆಯಲ್ಲಿ ಹೆಚ್ಚಿನ ಜನರೇನೂ ಕಂಡು ಬರುತ್ತಿಲ್ಲ. ಆದರೂ ಮುಂಜಾಗರೂಕತಾ ಕ್ರಮವಾಗಿ ಸೋಡಿಯಂ ಹೈಪೋ ಕ್ಲೋರೈಡ್    ದ್ರಾವಣವನ್ನು ಸ್ಪ್ರೇ ಮಾಡಲಾಗುತ್ತಿದೆ.

ಕೊರೋನಾ ವೈರಸ್ ಸೋಂಕನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೈಸೂರು ಜಿಲ್ಲೆಯಾದ್ಯಂತ ಲಾಕ್ ಡೌನ್ ಘೋಷಿಸಲಾಗಿದ್ದು, ಏ.14ವರೆಗೂ ಮುಂದುವರಿಯಲಿದೆ. ಮೈಸೂರಿನ ಏಳು ಸ್ಥಳಗಳಲ್ಲಿ ತರಕಾರಿ ಮಾರುಕಟ್ಟೆಯನ್ನು ತೆರೆಯಲಾಗಿದೆ. ಎಂ.ಜಿ.ರಸ್ತೆಯಲ್ಲಿರುವ ತರಕಾರಿ ಮಾರುಟ್ಟೆಯಲ್ಲಿ ಜನತೆ ತರಕಾರಿ ಖರೀದಿಸಲು ಬರುವಾಗ ಮುನ್ನೆಚ್ಚರಿಕಾ ಕ್ರಮವಾಗಿ ಸೋಡಿಯಂ ಹೈಪೋ ಕ್ಲೋರೈಡ್   ದ್ರಾವಣವನ್ನು ಅಭಿಯಂತರರಾದ ರಮೇಶ್ ಕಿಕ್ಕೇರಿಯವರು ಸಿಂಪಡಿಸುತ್ತಿದ್ದಾರೆ. ದ್ರಾವಣವು ಉತ್ತಮವಾಗಿ ಪ್ರತಿಕ್ರಿಯೆ ತೋರಿದಲ್ಲಿ ಅದನ್ನೇ ಎಲ್ಲ ಕಡೆಯೂ ಬಳಸುವುದಾಗಿ ತಿಳಿಸಿದ್ದಾರೆ.   ಪಾಲಿಕೆಯ ವೈದ್ಯಾಧಿಕಾರಿಗಳಾದ ಡಾ.ನಾಗರಾಜ್, ಡಾ.ಪ್ರವೀಣ್, ಹನುಮಂತರಾಜ್ ಅವರ ಸಲಹೆಯ ಮೇರೆಗೆ ದ್ರಾವಣ ಸಿಂಪಡಿಸಲಾಗುತ್ತಿದೆ.

ಈಗ ನಗರದ ವಿವಿಧೆಡೆಗಳಲ್ಲಿ ಮಾರುಕಟ್ಟೆ ತೆರೆದಿರುವುದರಿಂದ ಜನದಟ್ಟಣೆ ಕಡಿಮೆ ಆಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: