ಮೈಸೂರು

ಶ್ರೀನಿವಾಸನ್ ಸರ್ವೀಸಸ್‌ ಟ್ರಸ್ಟ್  ನಿಂದ ಕೊಡುಗೆ

ಮೈಸೂರು, ಏ.3:-  ಶ್ರೀನಿವಾಸನ್ ಸರ್ವೀಸಸ್‌ಟ್ರಸ್ಟ್ (ಎಸ್‌ಎಸ್‌ಟಿ) ಎಂಬುದು ಟಿ.ವಿ.ಎಸ್ ಮೋಟಾರ್‌ಕಂಪನಿಯ ಸಾಮಾಜಿಕ ಸೇವಾ ವಿಭಾಗವಾಗಿದ್ದು, ಇಂದು ಸುಮಾರು 10,000ಕ್ಕೂ ಅಧಿಕ ಮಾಸ್ಕ್ ಗಳನ್ನು ಮತ್ತು 3,000ಕ್ಕೂ ಅಧಿಕ ಗ್ಲೌಸ್‌ಗಳನ್ನು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಆರ್. ವೆಂಕಟೇಶ್‌ ಅವರಿಗೆ ಹಸ್ತಾಂತರಿಸಿದೆ.

ಜಿಲ್ಲಾ ಆರೋಗ್ಯ ಮತ್ತುಕುಟುಂಬ ಕಲ್ಯಾಣಾಧಿಕಾರಿ ಅವರ ಕಚೇರಿಯಲ್ಲಿಂದು ಇವುಗಳನ್ನು ಹಸ್ತಾಂತರಿಸಲಾಗಿದ್ದು, ಜಿಲ್ಲಾಧಿಕಾರಿ  ಅಭಿರಾಮ್ ಜಿ. ಶಂಕರ್‌ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. 10 ಲಕ್ಷ ಮಾಸ್ಕ್ ಗಳನ್ನು ಅಗತ್ಯ ಸೇವಾ ಕ್ಷೇತ್ರದ ಕಾರ್ಯಕರ್ತರು, ಆರೋಗ್ಯ ಸೇವಾ ಸಿಬ್ಬಂದಿ, ಪೊಲೀಸರಿಗೆ ವಿತರಿಸಲು ಉದ್ದೇಶಿಸಲಾಗಿದೆ.  ಕೋವಿಡ್-19ರೋಗ ಹಬ್ಬದಂತೆ ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಸಂಸ್ಥೆ ವಿವಿಧ ಕಾರ್ಯಗಳನ್ನು ಹಮ್ಮಿಕೊಂಡಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: