ಮೈಸೂರು

ಮೈಮುಲ್ ವತಿಯಿಂದ ಬಡವರು, ಕಾರ್ಮಿಕರಿಗೆ 30 ಸಾವಿರ ಲೀಟರ್ ಹಾಲು ವಿತರಣೆಗೆ ಚಾಲನೆ

ಮೈಸೂರು,ಏ.3:- ಕೋವಿಡ್-19 ಹಿನ್ನೆಲೆಯಲ್ಲಿ ಬಡವರು, ಕಟ್ಡಡ ಕಾರ್ಮಿಕರಿಗೆ ಉಚಿತವಾಗಿ ಹಾಲು ವಿತರಿಸುವ ಕಾರ್ಯಕ್ರಮಕ್ಕೆ ಇಂದು   ಮೈಸೂರಿನ ಡಾ.ರಾಜ್ ಕುಮಾರ್ ರಸ್ತೆಯಲ್ಲಿರುವ ಹುಡ್ಕೋ ಕಾಲೋನಿ ಬಳಿ ಚಾಲನೆ ನೀಡಲಾಯಿತು.

ಕೊರೋನಾ ಸೋಂಕು ಹರಡದಂತೆ ತಡೆಗಟ್ಟುವ ನಿಟ್ಟಿನಲ್ಲಿ ದೇಶಾದ್ಯಂತ ಲಾಕ್ ಡೌನ್ ಆಗಿರುವ ಸಂದರ್ಭದಲ್ಲಿ ಬಡವರು, ಕೂಲಿ ಕಾರ್ಮಿಕರು ದುಡಿಯಲು ಕೆಲಸವಿಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂಬ ಚಿಂತನೆಯೊಂದಿಗೆ, ಇಂತಹ ಕೂಲಿ ಕಾರ್ಮಿಕರು ವಾಸಿಸುವ ನಗರದ ಕೆಲವು ಭಾಗಗಳಲ್ಲಿ ಹಾಗೂ ತಾಲೂಕು ಪ್ರದೇಶಗಳಲ್ಲಿ ಪ್ರತಿದಿನ ಒಟ್ಟು 30 ಸಾವಿರ ಲೀಟರ್ ಹಾಲು ಹಂಚಲು ಮೈಮುಲ್ ಮುಂದಾಗಿದೆ ಎಂದು ಮೈಮುಲ್ ವ್ಯವಸ್ಥಾಪಕ ನಿರ್ದೇಶಕರಾದ ಆಶೋಕ್ ಮಾಹಿತಿ ನೀಡಿದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: