ಮೈಸೂರು

ಕೆ.ಆರ್.ನಗರದಲ್ಲಿ ಭೂಕಂಪನದ ಅನುಭವ : ಮನೆಯಿಂದ ಹೊರಗೋಡಿ ಬಂದ ಜನತೆ

ಮೈಸೂರು,ಏ.3:- ಮೈಸೂರು ಜಿಲ್ಲೆಯಲ್ಲಿ ಭೂಕಂಪನದ ಅನುಭವಾಗಿದೆ . ಮೈಸೂರು ಜಿಲ್ಲೆ ಕೆ.ಆರ್ ನಗರ ತಾಲೂಕಿನಲ್ಲಿ ಭೂಮಿ ನಡುಗಿದ ಅನುಭವವಾಗಿದ್ದು, ಜನತೆ ಮನೆಯಿಂದ ಹೊರಗೆ ಓಡಿ ಬಂದಿದ್ದಾರೆ.

ಭೇರ್ಯ ಗ್ರಾಮದ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವವಾಗಿದ್ದು, ಮುಂಜನಹಳ್ಳಿ ಗ್ರಾಮದಲ್ಲಿ ಮೇಲಿಟ್ಟ  ಪಾತ್ರೆಗಳು ನೆಲಕ್ಕುರುಳಿವೆ. ಮನೆಯ ಹೆಂಚುಗಳು ಕೂಡ ನೆಲಕ್ಕೆ ಬಿದ್ದಿದೆ ಎನ್ನಲಾಗಿದೆ. ಸ್ಥಳದಲ್ಲಿ ಆತಂಕಗೊಂಡ ಜನರು ಮನೆಯಿಂದ ಹೊರಗಡೆ ಓಡಿ ಬಂದಿದ್ದಾರೆ ಎಂದು ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: