ಮೈಸೂರು

ಇಂದಿನಿಂದ ಕೋವಿಡ್-19 ಆಯುರ್ ಕೇರ್ ವಿಭಾಗ ಕಾರ್ಯಾರಂಭ

ಮೈಸೂರು,ಏ.3:-  ಮೈಸೂರು ಕೋವಿಡ್-19 ಕೇರ್ ಟೀಮ್ (MCCT) ಅಡಿಯಲ್ಲಿ ಇಂದು ಕೋವಿಡ್-19 ಆಯುರ್ ಕೇರ್ ವಿಭಾಗವನ್ನು ತೆರೆಯಲಾಯಿತು.

6 ಜನ ನುರಿತ ಆಯುಷ್ ವೈದ್ಯರುಗಳ ಜೊತೆಯಲ್ಲಿ ಶಾಸಕ ಎಸ್.ಎ. ರಾಮದಾಸ್ ಚರ್ಚೆಯನ್ನು ನಡೆಸಿದರು, ಅದರಂತೆ ವೈದ್ಯರ ತಂಡ ಪ್ರತಿನಿತ್ಯವೂ ಮೈಸೂರಿನ ನಾಗರಿಕರು ತಮ್ಮ ಆರೋಗ್ಯಕ್ಕೆ ಸಂಬಂಧಿಸಿದ ಸಲಹೆಗಳನ್ನು ಮತ್ತು ವಿಚಾರಗಳ ವಿನಿಮಯವನ್ನು ಮಾಡಲು ಸದಾ ಸಿದ್ಧವಾಗಿರಲಿದೆ.  ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರಗೆ ಯಾರಿಗೆ ಅಪೇಕ್ಷೆ ಇದೆಯೋ ಅಂತಹವರು ದೂರವಾಣಿಯ ಮೂಲಕವಾಗಿ ತಮ್ಮ ಸಮಸ್ಯೆ ಹೇಳಿ ಪರಿಹಾರವನ್ನು ಪಡೆಯಬಹುದು ಎಂಬ ವಿಚಾರವನ್ನು  ಶಾಸಕರು ಇದೇ ವೇಳೆ ತಿಳಿಸಿದರು, ಮುಖ್ಯವಾಗಿ ಜಾಗತಿಕ ರೋಗ ಕೊರೋನಾದ ಸಂದರ್ಭದಲ್ಲಿ ಪ್ರತಿಯೊಬ್ಬರಲ್ಲೂ ಇದರ ಅವಶ್ಯಕತೆ ಇದೆ.

ಆಯುರ್ ಕೇರ್  ಆರೋಗ್ಯವನ್ನು ಕಾಪಾಡುವುದು , ಆತ್ಮ ವಿಶ್ವಾಸವನ್ನು ಹೆಚ್ಚಿಸುವುದು, ರೋಗ ನಿರೋಧಕ ಶಕ್ತಿ ( ಇಮ್ಯೂನಿಟಿ ಸಿಸ್ಟಂ) ಹೆಚ್ಚಿಸುವುದು, ಜೀವನ ಶೈಲಿ ಮತ್ತು ಆಹಾರ ಪದ್ದತಿಯ ಮೂಲಕವಾಗಿ ಸಾಮಾನ್ಯ ರೋಗ ಲಕ್ಷಣಗಳಿಗೆ ಪರಿಹಾರ, ಉಪಾಯ ತಿಳಿಸುವ ಉದ್ದೇಶವನ್ನಿಟ್ಟುಕೊಂಡು ಕಾರ್ಯ ನಿರ್ವಹಿಸಲಿದೆ.

ಈ ಉದ್ದೇಶಗಳನ್ನು ಇಟ್ಟುಕೊಂಡು ಕೋವಿಡ್-19 ಆಯುರ್ ಕೇರ್ ಒಂದು ವಿಭಾಗವನ್ನು ತೆರೆಯಲಾಗಿದೆ , ಉಚಿತವಾದಂತಹ ಸಲಹೆಯನ್ನು ದೂರವಾಣಿಯ ಮೂಲಕವಾಗಿ ಹಾಗೂ ಸಾಮಾಜಿಕ ಜಾಲತಾಣದ ಮೂಲಕವಾಗಿ ಈ ವೈದ್ಯರು ಸಲಹೆಗಳನ್ನು ನೀಡಲಿದ್ದಾರೆ. ಪ್ರತಿ ದಿವಸವೂ ಮೈಸೂರಿನ ಜನತೆಗೆ ಒಂದು ಸಲಹೆಯನ್ನು ಸಾಮಾಜಿಕ ಜಾಲದ ಮೂಲಕವಾಗಿ ತಿಳಿಸಲಿದ್ದಾರೆ, ವಿಶೇಷವಾಗಿ ಕ್ವಾರೆಂಟೈನ್ ನಲ್ಲಿರುವ ನಿವಾಸಿಗಳು ಸಮಸ್ಯೆಯಿದ್ದಲ್ಲಿ ನೇರವಾಗಿ ವೈದ್ಯರ ಜೊತೆಯಲ್ಲಿ ಸಂಪರ್ಕವನ್ನು ಪಡೆದು ಎಲ್ಲಾ ರೀತಿಯ ಆರೋಗ್ಯದ ಸಹಾಯವನ್ನು, ಆಹಾರ ಪದ್ದತಿಗಳ ವಿಚಾರವನ್ನು ಉಚಿತವಾಗಿ ಪಡೆಯಬಹುದೆಂದು   ಶಾಸಕರು ತಿಳಿಸಿದರು.

ಈ ವಿಚಾರವನ್ನು ಸಾಮಾಜಿಕ ಜಾಲದ ಮೂಲಕವಾಗಿ ಎಲ್ಲರ ಮನೆಮನೆಗೆ ಮುಟ್ಟಿಸುವ ಕೆಲಸವನ್ನು ಮೈಸೂರು ಕೋವಿಡ್ ಕೇರ್ ಟೀಂ (ಎಮ್.ಸಿ.ಸಿ.ಟಿ.) ಇಂದಿನಿಂದ ಈ ಆರೋಗ್ಯ ಸೇವೆಯನ್ನು ಕಾರ್ಯೋನ್ಮುಖ ಮಾಡಲಾಗಿದೆ. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆಯಬಹುದೆಂದು  ತಿಳಿಸಿದರು.

ಈ ಸಭೆಯಲ್ಲಿ  ಶ್ರೀಹರಿ, ವೈದ್ಯರಾದ  ಡಾ ಅನಿಲ್ ಕುಮಾರ್ C S – BAMS, MD (Ayu) – (30 yrs of experience)  ಮೊ.ಸಂ. 94480 43619, ಡಾ ದಯಾನಂದ R D – BAMS, MD – ಆರ್ಯುವೇದ ವೈದರು (21 yrs of experience )ಮೊ.ಸಂ 94807 21001, ಡಾ ಪಸನ್ನ ಪ್ರಕಾಶ್ – BAMS  ( 21 yrs of experience) ಮೊ.ಸಂ. 8277888521, ಡಾ ವೇದನಾಥ್ M S – BAMS, MBA, PGDHA  ( 21 yrs of experience) ಮೊ.ಸಂ, 99162 00341, ಡಾ ರಂಜಿನಿ ಕಾರ್ತಿಕ್ ಪಂಡಿತ್ – BAMS, MD (Ayu), ( 18 yrs of experience) ಮೊ.ಸಂ, 98860 1417, ಡಾ ಪ್ರಿಯಾಂಕ ಸಾಂದಿಲ್ಯಾ – BAMS, MD (Ayu) (2 yrs of experience) ಮೊ.ಸಂ 99020 88942 ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: