ಪ್ರಮುಖ ಸುದ್ದಿ

ವಲಸಿಗ ಕಾರ್ಮಿಕರಿಗೆ ಜಿಲ್ಲಾಡಳಿತದಿಂದ ದಿನಸಿ ಸಾಮಾಗ್ರಿ ವಿತರಣೆ

ರಾಜ್ಯ( ಮಡಿಕೇರಿ) ಏ.4 :- ಮಡಿಕೇರಿ ನಗರದ ಪೆನ್ಷನ್ ಲೇನ್‍ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಿರುವ ಒಡಿಸ್ಸಾ ಮೂಲದವರಿಗೆ ಜಿ.ಪಂ ಉಪಾಧ್ಯಕ್ಷರಾದ ಲೋಕೇಶ್ವರಿ ಗೋಪಾಲ್ ಅವರು ಆಹಾರ ಸಾಮಾಗ್ರಿ ವಿತರಿಸಿದರು.
ಜಿಲ್ಲಾಡಳಿತ ಹಾಗೂ ಕಾರ್ಮಿಕ ಇಲಾಖೆ ವತಿಯಿಂದ ಬೇರೆ ಜಿಲ್ಲೆ ಮತ್ತು ರಾಜ್ಯಗಳಿಂದ ಆಗಮಿಸಿರುವ ವಲಸೆ ಕಾರ್ಮಿಕರಿಗೆ ಪಡಿತರವನ್ನು ವಿತರಿಸಲಾಗುತ್ತಿದೆ.
ಒಡಿಸ್ಸಾ ಮೂಲದ 5 ಜನ ಮತ್ತು ಹುಬ್ಬಳ್ಳಿಯ ಒಬ್ಬರು ಸೇರಿದಂತೆ ಒಟ್ಟು 6 ಜನ ಹಾಗೂ ಕಾನ್ವೆಂಟ್ ಜಂಕ್ಷನ್‍ನಲ್ಲಿ ಖಾಲಿ ಜಾಗದಲ್ಲಿ ಶೇಡ್‍ನಲ್ಲಿ ವಾಸವಿರುವ ಬೇಲೂರಿನ 2 ಕಟ್ಟಡ ಕಾರ್ಮಿಕರು ಮತ್ತು 2 ಮಕ್ಕಳು ಸೇರಿ ಒಟ್ಟು 4 ಜನ ಸೇರಿದಂತೆ ಒಟ್ಟಾರೆಯಾಗಿ 10 ಜನ ಕಾರ್ಮಿಕರಿಗೆ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ವತಿಯಿಂದ ಅಗತ್ಯ ದಿನಸಿ ಪದಾರ್ಥಗಳನ್ನು ವಿತರಿಸಲಾಯಿತು.
ಸೋಮವಾರಪೇಟೆ ತಾಲ್ಲೂಕಿನ ಮುಳ್ಳುಸೂಗೆ ಗ್ರಾಮದಲ್ಲಿ ಬಾಡಿಗೆ ಮನೆಗಳಲ್ಲಿ ವಾಸವಿರುವ ಉತ್ತರಪ್ರದೇಶದ 13 ಮತ್ತು ಮಧ್ಯಪ್ರದೇಶದ 9 ಜನ ಸೇರಿದಂತೆ ಒಟ್ಟು 22 ಜನ ಟೈಲ್ಸ್ ಪಾಲೀಶ್ ಮತ್ತು ಫರ್ನಿಚರ್ ಕೆಲಸ ನಿರ್ವಹಿಸುವ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ಜಿಲ್ಲಾಡಳಿತ ಮತ್ತು ಕಾರ್ಮಿಕ ಇಲಾಖೆ ವತಿಯಿಂದ ಅಗತ್ಯ ದಿನಸಿ ಸಾಮಾಗ್ರಿಗಳನ್ನು ಶುಕ್ರವಾರ ಕುಶಾಲನಗರದ ಕೋವಿಡ್-19 ನೋಡಲ್ ಅಧಿಕಾರಿ ವಿರುಪಾಕ್ಷ ಅವರು ವಿತರಿಸಿದರು.
ಮಡಿಕೇರಿಯ ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಮ್.ಎಮ್ ಯತ್ನಟ್ಟಿ, ಇಂಡಿಯನ್ ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಬಿ.ಕೆ. ರವೀಂದ್ರ ರೈ ಮತ್ತು ಕಾರ್ಯದರ್ಶಿಯಾದ ಮುರಳೀಧರ್ ರಾವ್ ಇಂಡಿಯನ್ ರೆಡ್ ಕ್ರಾಸ್ ಸಂಸ್ಥೆಯ ಕಾರ್ಯದರ್ಶಿಯಾದ ಕೆ.ಪಿ.ಚಂದ್ರ ಮತ್ತು ಕರ್ನಾಟಕ ಕಾವಲು ಪಡೆಯ ಅಧ್ಯಕ್ಷರಾದ ಕೃಷ್ಣ ಎಂ. ಹಾಜರಿದ್ದರು.
ಮತ್ತೊಂದೆಡೆ ಸಿದ್ದಾಪುರದ ವಿವಿಧ ಕಡೆ ಬಾಡಿಗೆ ಮನೆಗಳಲ್ಲಿ ವಾಸವಿರುವ ಪಶ್ಚಿಮ ಬಂಗಾಳದ 2, ಆಸ್ಸಾಂನ 31 ಜನ ಕಟ್ಟಡ, ನರ್ಸರಿ ಕೆಲಸಗಾರರಿಗೆ ಮತ್ತು ನಗರದ ರಾಣಿಪೇಟೆಯಲ್ಲಿರುವ ಜಾಖರ್ಂಡನ 8, ಆಂಧ್ರ ಪ್ರದೇಶದ 1 ಮತ್ತು ಹೊಳೆನರಸಿಪುರದ 1 ಗಾರೆಕೆಲಸದ ಕಾರ್ಮಿಕರು ಸೇರಿದಂತೆ ಒಟ್ಟು 43 ಕಾರ್ಮಿಕರಿಗೆ ಜಿಲ್ಲಾಡಳಿತ, ಕಾರ್ಮಿಕ ಇಲಾಖೆ ವತಿಯಿಂದ ಅಗತ್ಯ ದಿನಸಿ ಸಾಮಾಗ್ರಿಗಳನ್ನು ವಿತರಿಸಲಾಯಿತು. ಮಡಿಕೇರಿ ತಾಲ್ಲೂಕು ಹಿರಿಯ ಕಾರ್ಮಿಕ ನಿರೀಕ್ಷಕರಾದ ಎಂ.ಎಂ. ಯತ್ನಟ್ಟಿ, ಸಿದ್ದಾಪುರ ಗ್ರಾಮ ಪಂಚಾಯತ ಪಿಡಿಒ ವಿಶ್ವನಾಥ ಕೆ.ಸಿ ಮತ್ತು ಸಿಬ್ಬಂದಿ ಸುರೇಶ ಇತರರು ಹಾಜರಿದ್ದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: