ಪ್ರಮುಖ ಸುದ್ದಿ

ಪ್ರಧಾನಿಯ ಕರೆಗೆ ಕೊಡಗು ಮುಸ್ಲಿಂ ಧರ್ಮಗುರುಗಳ ಸ್ಪಂದನ

ರಾಜ್ಯ( ಮಡಿಕೇರಿ) ಏ.4 :- ದೇಶದ ಜನತೆಯನ್ನು ಕಾಡುತ್ತಿರುವ ಕೊರೋನಾ ಎಂಬ ಮಾರಕ ರೋಗದ ವಿರುದ್ಧ ಏಕತೆಯಿಂದ ಹೋರಾಡುವ ಸಲುವಾಗಿ ತಾ. 5 ರಂದು ಭಾನುವಾರ ರಾತ್ರಿ ಜ್ಯೋತಿ ಬೆಳಗುವ ಮೂಲಕ ಐಕ್ಯತೆಯನ್ನು ಪ್ರದರ್ಶಿಸಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದ ಜನತೆಗೆ ನೀಡಿರುವ ಕರೆಗೆ ಕೊಡಗಿನ ಮುಸ್ಲಿಂ ಧರ್ಮಗುರುಗಳು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.
ಪ್ರಧಾನಿ ತಿಳಿಸಿದಂತೆ ಅಂದು ರಾತ್ರಿ 9 ಗಂಟೆಗೆ ಜಿಲ್ಲೆಯ ಎಲ್ಲ ಮುಸ್ಲಿಮರು ತಮ್ಮ ಮನೆಮಂದಿಯೊಂದಿಗೆ ಸೇರಿಕೊಂಡು ಕೊರೋನಾ ರೋಗದ ನಿರ್ಮೂಲನೆಗಾಗಿ ಸರ್ವಶಕ್ತನಾದ ಅಲ್ಲಾಹನಲ್ಲಿ ಪ್ರಾರ್ಥಿಸುವ ಮೂಲಕ ವಿವಿಧತೆಯಲ್ಲಿ ಏಕತೆಯನ್ನು ಪ್ರದರ್ಶಿಸುವಂತೆ ಜಿಲ್ಲೆಯ ಖಾಝಿಗಳಾದ ಹಾಜಿ ಕೆ.ಎ. ಮಹಮೂದ್ ಮುಸ್ಲಿಯಾರ್ ಹಾಗೂ ಹಾಜಿ ಎಂ.ಎಂ. ಅಬ್ದುಲ್ಲ ಮುಸ್ಲಿಯಾರ್ ಇವರುಗಳು ಎಲ್ಲ ಜಮಾತ್ ಗಳ ಪ್ರಮುಖರೊಂದಿಗೆ ವಿನಂತಿಸಿಕೊಂಡಿದ್ದಾರೆ.
ಈ ಕುರಿತು ಸಂಬಂಧಪಟ್ಟವರಿಗೆ ಸಾಮಾಜಿಕ ಜಾಲತಾಣಗಳ ಮೂಲಕ ಉಭಯ ಖಾಝಿಗಳು ಸುತ್ತೋಲೆಯನ್ನು ಕೂಡ ಕಳುಹಿಸಿದ್ದಾರೆ ಎಂದು ತಿಳಿದು ಬಂದಿದೆ. (ಕೆಸಿಐ,ಎಸ್.ಎಚ್)

Leave a Reply

comments

Related Articles

error: