ಕ್ರೀಡೆ

ಕೊರೋನಾ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿದ ಟೀಮ್ ಇಂಡಿಯಾದ ಫೀಲ್ಡಿಂಗ್ ಕೋಚ್  

ದೇಶ(ನವದೆಹಲಿ)ಏ.3:- ಕೊರೋನಾ ವೈರಸ್ ವಿರುದ್ಧದ ಯುದ್ಧಕ್ಕೆ ಭಾರತೀಯ ತಂಡದ ಫೀಲ್ಡಿಂಗ್ ಕೋಚ್ ಆರ್ ಶ್ರೀಧರ್ 4 ಲಕ್ಷ ರೂ. ದೇಣಿಗೆಯನ್ನು  ನೀಡಲು ಬಯಸಿದ್ದಾರೆ.

ಪಿ.ಎಂ ಕೇರ್ಸ್ ನಿಧಿಗೆ 2ಲಕ್ಷರೂ,  1.5 ಲಕ್ಷ ರೂ.ಗಳನ್ನು ತೆಲಂಗಾಣ ಸಿಎಂ ರಿಲೀಫ್ ಫಂಡ್ ಗೂ ಸಿಕಂದ್ರಾಬಾದ್  ಕಂಟೋನ್ಮೆಂಟ್ ಮಂಡಳಿಗೆ 50,000 ರೂ. ನೀಡಲು ನಿರ್ಧರಿಸಿದ್ದಾರೆ. “ಹೆಮ್ಮೆಯ ಭಾರತೀಯ ಪ್ರಜೆಯಾಗಿ ನಾನು 2 ಲಕ್ಷ   ರೂಪಾಯಿಗಳನ್ನು ಪ್ರಧಾನಿ ಪರಿಹಾರ ನಿಧಿಗೆ, 1.5ಲಕ್ಷರೂಗಳನ್ನು ತೆಲಂಗಾಣ ಸಿಎಂ ರಿಲೀಫ್ ಫಂಡ್ಗೂ ಮತ್ತು 50,000 ರೂಗಳನ್ನು ಸಿಕಂದರಾಬಾದ್  ಕಂಟೋನ್ಮೆಂಟ್ ಮಂಡಳಿಗೆ  ನೀಡಲು ನಿರ್ಧರಿಸಿದ್ದೇನೆ” ಎಂದು ಟ್ವೀಟರ್ ನಲ್ಲಿ  ಬರೆದಿದ್ದಾರೆ. (ಏಜೆನ್ಸಿಸ್,ಎಸ್.ಎಚ್)

Leave a Reply

comments

Related Articles

error: