ಮನರಂಜನೆ

ಎಲ್ಲ ದಾಖಲೆಗಳನ್ನು ಮುರಿದ ರಾಮಾಯಣ ಮರುಪ್ರಸಾರ : ಟಿಆರ್ ಪಿ ಓಟದಲ್ಲಿ ಎಲ್ಲಕ್ಕಿಂತ ಮುಂದೆ

ದೇಶ(ನವದೆಹಲಿ)ಏ.3:-   ಕೊರೋನವೈರಸ್  ಹರಡದಂತೆ ತಡೆಯಲು ಏಪ್ರಿಲ್ 14 ರವರೆಗೆ ಇಡೀ ದೇಶ ಲಾಕ್ ಡೌನ್ ಆಗಿದ್ದು,  ಜನರು ಮನೆಯಲ್ಲಿ ಕುಳಿತು ಸಮಯ ಕಳೆಯುವುದು ದೊಡ್ಡ ಸವಾಲಾಗಿದೆ. ಇದನ್ನು ಗಮನದಲ್ಲಿಟ್ಟುಕೊಂಡು ಮಾಹಿತಿ ಪ್ರಸಾರ ಸಚಿವ ಪ್ರಕಾಶ್ ಜಾವಡೇಕರ್ ಅವರು ಪ್ರಸಿದ್ಧ ಧಾರಾವಾಹಿ ‘ರಾಮಾಯಣ’ದ ಮರು ಪ್ರಸಾರದ ಬಗ್ಗೆ ಮಾತನಾಡಿದ್ದು, ಮರು ಪ್ರಸಾರ ಆರಂಭಿಸಿದ್ದಾರೆ.

ಮರುಪ್ರಸಾರ  ಮತ್ತೊಮ್ಮೆ ಡಿಡಿ ನ್ಯಾಷನಲ್‌ನಲ್ಲಿ ಬರುತ್ತಿದ್ದು,    ಬೆಳಿಗ್ಗೆ 9ರಿಂದ 10 ಕ್ಕೆ ಒಂದು ಪ್ರಸಂಗವನ್ನು ಮತ್ತು ಎರಡನೇ ಕಂತು ರಾತ್ರಿ 9ರಿಂದ 10 ರವರೆಗೆ ಪ್ರಸಾರವಾಗುತ್ತಿದೆ.  ಸರ್ಕಾರ ತೆಗೆದುಕೊಂಡ ನಿರ್ಧಾರ ಅದ್ಭುತವಾಗಿದ್ದು, ಈ ಪೌರಾಣಿಕ ಧಾರವಾಹಿ  ವೀಕ್ಷಕರಿಂದ ಸಾಕಷ್ಟು ಮೆಚ್ಚುಗೆಯನ್ನು ಪಡೆದಿವೆ.

ರಾಮಾಯಣ’ ಎಂಬ ಟಿವಿ ಧಾರಾವಾಹಿಯ ವೀಕ್ಷಕರಿಂದ ಪಡೆದ ಪ್ರೀತಿಯಿಂದಾಗಿ,   ಟಿಆರ್‌ಪಿ ಎತ್ತರಕ್ಕೆ  ತಲುಪಿದೆ. ಟಿಆರ್‌ಪಿ ವಿಷಯದಲ್ಲಿ ಎಲ್ಲಾ ದಾಖಲೆಗಳನ್ನು ಮುರಿದು ರಾಮಾಯಣ ಅತ್ಯುತ್ತಮ ಪ್ರತಿಕ್ರಿಯೆ ಗಳಿಸಿದೆ. ಇದನ್ನು ಪ್ರಸಾರ್ ಭಾರತಿ ಸಿಇಒ ಶಶಿ ಶೇಖರ್ ಸ್ವತಃ ಘೋಷಿಸಿದ್ದಾರೆ. ‘ರಾಮಾಯಣ’ ನೋಡುವವರನ್ನು ಅಭಿನಂದಿಸಿದ ಅವರು   ಟ್ವೀಟರ್ ಖಾತೆಯಲ್ಲಿ ಟ್ವೀಟ್ ಮಾಡಿದ್ದು,  ಈ ಟಿವಿ ಕಾರ್ಯಕ್ರಮಕ್ಕೆ ಪ್ರೇಕ್ಷಕರಿಂದ ಭಾರೀ ಪ್ರತಿಕ್ರಿಯೆ ವ್ಯಕ್ತವಾಗಿದೆ.  ಈ ಟಿವಿ ಕಾರ್ಯಕ್ರಮವು ದೂರದರ್ಶನದ ಅತ್ಯಧಿಕ ಟಿಆರ್‌ಪಿ ಕಾರ್ಯಕ್ರಮವಾಗಿದೆ ಎಂದು   ಮಾಹಿತಿ ನೀಡಿದ್ದಾರೆ. (ಏಜೆನ್ಸಿಸ್.ಎಸ್.ಎಚ್)

 

Leave a Reply

comments

Related Articles

error: