ಮೈಸೂರು

ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಬಡ ಕುಟುಂಬದವರಿಗೆ  ಉಚಿತ ಹಾಲು ವಿತರಣೆ : ಶಾಸಕ ಎಲ್.ನಾಗೇಂದ್ರ ಚಾಲನೆ

ಮೈಸೂರು,ಏ.4:- ಕೋವಿಡ್-19 / ಕೊರೋನಾ ರೋಗ ನಿಯಂತ್ರಣದ ಲಾಕ್ ಡೌನ್ ನಿಮಿತ್ತ ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಬಡ ಕುಟುಂಬದವರಿಗೆ  ಉಚಿತ ಹಾಲು ವಿತರಣೆ ಕಾರ್ಯಕ್ರಮಕ್ಕೆ ಶಾಸಕ ಎಲ್.ನಾಗೇಂದ್ರ ಇಂದು ಚಾಲನೆ ನೀಡಿದರು.

ಇಂದು ಬೆಳಿಗ್ಗೆ ಚಾಮರಾಜ ವಿಧಾನ ಸಭಾ ಕ್ಷೇತ್ರದ ಮಾನ್ಯ ಶಾಸಕರಾದ   ಎಲ್. ನಾಗೇಂದ್ರ  ಮೈಸೂರು ನಗರದ ರಾಜರಾಜೇಶ್ವರಿ ನಗರದಲ್ಲಿ ರಾಜ್ಯ ಸರ್ಕಾರದ ಆದೇಶದಂತೆ ಮೈಸೂರು ಚಾಮರಾಜನಗರ ಜಿಲ್ಲಾ ಹಾಲು ಒಕ್ಕೂಟದ ವತಿಯಿಂದ ಸರಬರಾಜು ಮಾಡುವ ಹಾಲನ್ನು ಚಾಮರಾಜ ವಿಧಾನ ಸಭಾ ಕ್ಷೇತ್ರದಲ್ಲಿರುವ ಒಟ್ಟು 25 ಕೊಳಗೇರಿಗಳಲ್ಲಿ ವಾಸಿಸುತ್ತಿರುವ ಸುಮಾರು 6149 ಕುಟುಂಬಗಳಿಗೆ ಪ್ರತಿ ಕುಟುಂಬಕ್ಕೆ 1 ಲೀಟರ್ ನಂತೆ ಉಚಿತ ಹಾಲು ವಿತರಣೆ ಮಾಡುವ ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿದರು.

ಈ ಸಮಯದಲ್ಲಿ ನೋಡಲ್ ಅಧಕಾರಿಯಾದ   ಹರ್ಷಿತ, ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದೇವರಾಜೆಗೌಡ,  ಗಿರೀಶ್, ಕಿರಿಯ ಅಭಿಯಂತರರು, ವಾಣಿವಿಲಾಸ ನೀರು ಸರಬರಾಜು, ಮಹಾನಗರ ಪಾಲಿಕೆ ಅಧಿಕಾರಿಗಳು, ಕೊಳಚೆ ನಿರ್ಮೂಲನಾ ಮಂಡಳಿಯ ಅಧಿಕಾರಿಗಳು ಹಾಜರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: