ಮೈಸೂರು

ಲಾಕ್‍ಡೌನ್  ಘೋಷಣೆ ಹಿನ್ನೆಲೆ : ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದ  ಶಾರದಾದೇವಿ ನಗರ ಮತ್ತು ಸುತ್ತಮುತ್ತಲಿನ 100 ಜನರಿಗೆ ದಿನಸಿ ವಿತರಣೆ

ಮೈಸೂರು,ಏ.4:- ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್‍ಡೌನ್  ಘೋಷಿಸಲಾಗಿದ್ದು,  ಬಹಳ ಸಂಕಷ್ಟಕ್ಕೆ ಸಿಲುಕಿರುವ ಚಾಮುಂಡೇಶ್ವರಿ ಕ್ಷೇತ್ರದ ಬಡಜನರನ್ನು ಗುರುತಿಸಿ ನಿನ್ನೆ  ಬಿಜೆಪಿ ಚಾಮುಂಡೇಶ್ವರಿ (ನಗರ) ಮಂಡಲ ವತಿಯಿಂದ ದಿನಸಿ, ತರಕಾರಿಗಳನ್ನು   ವಿತರಿಸಲಾಯಿತು.

ಲಾಕ್‍ಡೌನ್ ಹಿನ್ನೆಲೆಯಲ್ಲಿ ಕೆಲಸವಿಲ್ಲದೆ ಸಂಕಷ್ಟದಲ್ಲಿದ್ದ  ಶಾರದಾದೇವಿ ನಗರ ಮತ್ತು ಸುತ್ತಮುತ್ತಲಿನ 100 ಜನರಿಗೆ 5 ಕೆಜಿ ಅಕ್ಕಿ, 1 ಕೆಜಿ ಬೇಳೆ, ಎಣ್ಣೆ, ಉಪ್ಪು, ಸಕ್ಕರೆ, ಟೀಪುಡಿ, ರವೆ, ಸೋಪು, ಈರುಳ್ಳಿ, ಆಲೂಗೆಡ್ಡೆ, ಟೊಮೆಟೊ ಮೊದಲಾದ ದಿನಸಿ ಪದಾರ್ಥಗಳ ಕಿಟ್‍ಗಳನ್ನು ವಿತರಿಸಲಾಯಿತು.  ಅಷ್ಟೇ ಅಲ್ಲದೇ   300 ಮಂದಿಗೆ ತರಕಾರಿ ನೀಡಲಾಯಿತು. ಈ ವೇಳೆ ಮಂಡಲದ ಅಧ್ಯಕ್ಷ ಬಿ.ಎಂ.ರಘು   ಮಾ.5ರ ರಾತ್ರಿ 9 ಗಂಟೆಗೆ ಪ್ರತಿಮನೆಯಲ್ಲಿಯೂ ದೀಪ ಬೆಳಗಿಸುವ ಮೂಲಕ ಪ್ರಧಾನಿಗಳ ಕರೆಯನ್ನು ಬೆಂಬಲಿಸುವಂತೆ ಕೋರಿದರು.

ಈ ಸಂದರ್ಭ ಕಾರ್ಯದರ್ಶಿ ರಾಜಮಣಿ, ಉಪಾಧ್ಯಕ್ಷ ಸಿದ್ದೇಶ್, ಕಾರ್ಯಾಲಯ ಕಾರ್ಯದರ್ಶಿ ಬಿ.ಸಿ.ಶಶಿಕಾಂತ್, ಯುವ ಮೋರ್ಚಾ ಅಧ್ಯಕ್ಷ ರಾಕೇಶ್ ಭಟ್, ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಸುಜೀತ್, ಶುಭಾಶ್ರೀ, ರಾಜಪ್ಪಾಜಿ, ಗಿರೀಶ್, ರೇವಣ್ಣ, ಎಸ್‍ಟಿ ಮೋರ್ಚಾ ಅಧ್ಯಕ್ಷ ಬೆಟ್ಟ, ಅಭಿಗೌಡ  ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: