ಮೈಸೂರು

ನಂಜನಗೂಡಿನಲ್ಲಿ ನಡೆಯಬೇಕಿದ್ದ ಪಂಚ ರಥೋತ್ಸವ ರದ್ದು ಹಿನ್ನೆಲೆ : ಪುಟ್ಟ ತೇರಿನಲ್ಲಿ ರಥ ಎಳೆದ ಯುವಕರು

ಮೈಸೂರು,ಏ.4:-  ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಲಾಕ್ ಡೌನ್ ಘೋಷಿಸಲಾಗಿದ್ದು,   ನಂಜನಗೂಡಿನಲ್ಲಿ  ಇಂದು ನಡೆಯಬೇಕಿದ್ದ ನಂಜನಗೂಡಿನ ಪಂಚರಥೋತ್ಸವ ವನ್ನು ಜಿಲ್ಲಾಡಳಿತ ರದ್ದು ಮಾಡಿದ್ದು, ಪುಟ್ಟ ತೇರಿನಲ್ಲಿ ನಂಜುಂಡನ ಮೆರವಣಿಗೆ ನಡೆಸಲಾಯಿತು.

ಕೊರೋನಾ ಉಲ್ಬಣವಾದ ಹಿನ್ನೆಲೆಯಲ್ಲಿ  ಜಿಲ್ಲಾಡಳಿತ ರಥೋತ್ಸವ ರದ್ದು ಮಾಡಿದ್ದು, ದೇವಾಲಯದಲ್ಲಿ ಧಾರ್ಮಿಕ‌ ಕೈಂಕರ್ಯ ಅರ್ಚಕ ವರ್ಗದವರಿಂದಷ್ಟೇ ನಡೆದಿದ್ದು,  ನಂಜುಂಡನ ಭಕ್ತರು ಸರಳ ರಥೋತ್ಸವ ನಡೆಸಿದರು. ಇಂದು ಮುಂಜಾನೆ ಸರಳವಾಗಿ ನಾಲ್ಕೈದು ಯುವಕರು ರಥ ಎಳೆದರು. ದೊಡ್ಡ ರಥದ ಮಾದರಿಯಲ್ಲಿ ಪುಟ್ಟ ರಥವನ್ನು ಎಳೆದರು.

ಕೊರೋನಾ ಭಯವಿಲ್ಲದಿದ್ದರೆ  ರಥೋತ್ಸವದಲ್ಲಿ ಲಕ್ಷಾಂತರ ಭಕ್ತರು ತುಂಬಿ ತುಳುಕುತ್ತಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: