ಮೈಸೂರು

ಸಿದ್ದರಾಮಯ್ಯ ಅಭಿಮಾನಿಗಳ ಬಳಗದ ವತಿಯಿಂದ ಬಡವರಿಗೆ, ಅಶಕ್ತರಿಗೆ ಉಚಿತ ಹಾಲು ವಿತರಣೆ

ಮೈಸೂರು,ಏ.3:- ಕೊರೋನಾ ಮುಕ್ತ ಹೋರಾಟಕ್ಕಾಗಿ ಇಡೀ ಭಾರತವೇ ಲಾಕ್ ಡೌನ್ ಆಗಿರುವುದರಿಂದ ಜನಸಾಮಾನ್ಯರ ಜೀವನ ಅಸ್ತವ್ಯಸ್ತವಾಗಿದ್ದು  ಮಾಜಿಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರ ಅಭಿಮಾನಿಗಳ ಬಳಗದ ವತಿಯಿಂದ ಹೊಸಬಂಡಿಕೇರಿ, ಮೇದರಕೇರಿ ಬಡಾವಣೆಗಳ ನಿವಾಸಿಗಳಿಗೆ ಬಡವರಿಗೆ, ಅಶಕ್ತರಿಗೆ  ಇಂದು  ಉಚಿತವಾಗಿ ಅವರ ಮನೆಬಾಗಿಲಿಗೆ   ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕಿನ ಉಪಾಧ್ಯಕ್ಷರಾದ ಬಸವರಾಜು ಬಸಪ್ಪ ಅವರ ನೇತೃತ್ವದಲ್ಲಿ  ಹಾಲನ್ನು ನೀಡಲಾಯಿತು,

ಈ ಸಂದರ್ಭ ಮಾತನಾಡಿದ  ಬಸವರಾಜು ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಅವರ ಮಾರ್ಗದರ್ಶನದಂತೆ ಅನ್ನಭಾಗ್ಯದಂತ ಜನಪರ ಯೋಜನೆಗಳಿಂದ ಪ್ರೇರೇಪಿತರಾಗಿ ಬಡಾವಣೆಗಳ ಬಡವರಿಗೆ ದಿನನಿತ್ಯಕ್ಕೆ ಅವಶ್ಯಕವಾದ ಹಾಲನ್ನು ಉಚಿತವಾಗಿ ಮನೆಮನೆಗೆ ತಲುಪಿಸಲಾಗಿದೆ,   ಮಹಾಮಾರಿ ಕೊರೋನಾ ಸೋಂಕನ್ನು ತಡೆಗಟ್ಟಲು ಇಡೀ ದೇಶವೇ ಬಂದ್ ಆಗಿದೆ, ಆದರೆ  ದಿನಗೂಲಿ ನೌಕರರು, ಆರ್ಥಿಕವಾಗಿ ಹಿಂದುಳಿದವರ ಕುಟುಂಬಗಳು ಬಹಳ ಸಂಕಷ್ಟದಲ್ಲಿದೆ. ಮಾನವೀಯತೆ  ದೃಷ್ಟಿಯಲ್ಲಿ ನಾವೆಲ್ಲರೂ ಅಶಕ್ತರಿಗೆ ಸ್ಪಂದಿಸುವುದು ನಮ್ಮ ಕರ್ತವ್ಯ. ಹಿರಿಯ ನಾಗರೀಕರು ಮತ್ತು ಸಣ್ಣಪುಟ್ಟ ಮಕ್ಕಳನ್ನು ಮನೆಯಿಂದ ಬರದ ಹಾಗೇ ಪ್ರತಿಯೊಬ್ಬರೂ ಗಮನ ಹರಿಸಬೇಕಾಗಿದೆ. ನಂಜುಮಳಿಗೆ, ಬಂಡಿಕೇರಿ, ಮೇದರಕೇರಿ ಬಡಾವಣೆಗಳ ನಿವಾಸಿಗಳಿಗೆ ಆರೋಗ್ಯ ಮತ್ತು ಆಹಾರ ವ್ಯವಸ್ಥೆಯ  ತೊಂದರೆಯಾದರೆ ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅಭಿಮಾನಿಗಳ ಬಳಗದ ವತಿಯಿಂದ ಕನಕ ನಾಗರೀಕರ ಟಾಸ್ಕ್ ಫೋರ್ಸ್ ರಚಿಸಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ಮೊ.ಸಂ 9141719577 ಸಂಪರ್ಕಿಸಬಹುದು ಎಂದರು.

ಮುಖಂಡರಾದ  ತೀರ್ಥಕುಮಾರ್, ಜವರಪ್ಪ, ಸಿದ್ದರಾಜು, ವೆಂಕಟೇಶ್, ಮಂಜಣ್ಣ, ಶಿವಸ್ವಾಮಿ, ಮರಿಸ್ವಾಮಿ, ಕೋಳಿ ಸಿದ್ದಣ್ಣ, ಜಯರಾಮು, ಜಿಕೆ ರವಿ, ಲೀಲಾ, ಜಯಮ್ಮ, ರಾಧಮ್ಮ ಮುಂತಾದವರು ಭಾಗವಹಿಸಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: