ಮೈಸೂರು

ಕೆಲಸವಿಲ್ಲದೆ ವೃತ್ತಿಪರ ಛಾಯಾಗ್ರಾಹಕರು ಸಂಕಷ್ಟದಲ್ಲಿ : ಪರಿಹಾರಕ್ಕೆ ಒತ್ತಾಯ

ಮೈಸೂರು,ಏ.4:-  ದೇಶಾದ್ಯಂತ ಲಾಕ್ ಡೌನ್ ಹಿನ್ನಲೆ ಮೈಸೂರಿನಲ್ಲಿಯೂ ಲಾಕ್ ಡೌನ್ ಘೋಷಣೆಯಾಗಿದ್ದು, ವೃತ್ತಿ ಪರ ಛಾಯಾಗ್ರಾಹಕರಿಗೆ ಸಂಕಷ್ಟ ಬಂದೊದಗಿದೆ.

ಈ ತಿಂಗಳುಗಳಲ್ಲಿ ಹೆಚ್ಚು ವಹಿವಾಟು ನಡೆಸುತ್ತಿದ್ದ ಛಾಯಾಗ್ರಹಣ ಉದ್ಯಮ ಕೊರೋನಾ ಮಾಹಾಮಾರಿಯಿಂದಾಗಿ  ವಹಿವಾಟು ಸಂಪೂರ್ಣ ಕುಸಿತಗೊಂಡಿದೆ. ಈ ವೃತ್ತಿಯನ್ನೇ ನಂಬಿಕೊಂಡು ಛಾಯಾಗ್ರಾಹಕರು ಲಕ್ಷ ಲಕ್ಷ ಬಂಡವಾಳ ಹಾಕಿದ್ದರು. ಆದರೆ ಈಗ ಕೆಲಸವೇ ಇಲ್ಲವಾಗಿದೆ. ವೃತ್ತಿಪರ ಛಾಯಾಗ್ರಾಹಕರಿಗೂ ಪರಿಹಾರ ನೀಡಲು  ಫೋಟೋ ಗ್ರಾಫರ್ಸ್ ಅಂಡ್ ವಿಡಿಯೋ ಗ್ರಾಫರ್ಸ್ ಅಸೋಸಿಯೇಷನ್ ಮನವಿ ಮಾಡಿದೆ. ಒಂದೆಡೆ ಕೊರೋನಾ ಭೀತಿ ಎದುರಾಗಿದ್ದರೆ , ಬದುಕನ್ನು ಕಟ್ಟಿಕೊಳ್ಳಲು ಆಧಾರವಾಗಿದ್ದ ವೃತ್ತಿಗಳಿಗೆ  ಪೆಟ್ಟು ಬಿದ್ದಿದೆ. ಸಂಪಾದನೆಯ ದಾರಿ ಕಾಣದೆ   ಕಂಗಾಲಾಗಿದ್ದು, ಕೊರೋನಾದಿಂದ  ಜಿಲ್ಲೆಯಾದ್ಯಂತ  ಎಲ್ಲಾ ವಿವಾಹ ಹಾಗೂ ಶುಭ ಸಮಾರಂಭಗಳಿಗೆ ಬ್ರೇಕ್ ಬಿದ್ದಿದೆ.   ವಿಡಿಯೋ ಗ್ರಾಫರ್ಸ್ ಗಳು ಕೆಲಸವಿಲ್ಲದೆ ಸಂಪಾದನೆಯೂ ಇಲ್ಲದೆ ತಮ್ಮ ಕುಟುಂಬ ನಿರ್ವಹಣೆಗೆ ಸಂಕಷ್ಟ ಪಡುವಂತಾಗಿದೆ.  ರಾಜ್ಯ ಸರ್ಕಾರದಿಂದ ಪರಿಹಾರ‌ ನೀಡಲು‌ ಒತ್ತಾಯ ಕೇಳಿ ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: