ಮೈಸೂರು

ನಗರಪಾಲಿಕೆ ಸಿಬ್ಬಂದಿಗಳಿಗೆ ಆಹಾರ ವಿತರಣೆ

ಮೈಸೂರು,ಏ.4:- ಶ್ರೀಕಂಠೇಶ್ವರ ಸೇವಾ ಸಂಘದ ವತಿಯಿಂದ ಕೋವಿಡ್-19 ಕರ್ತವ್ಯ ನಿರತ ನಗರ ಪಾಲಿಕೆ ಸಿಬ್ಬಂದಿಗಳಿಗೆ ಬೆಳಗಿನ ಉಪಹಾರದ ಜೊತೆಗೆ ಹಣ್ಣು, ಸಿಹಿ ತಿಂಡಿಯನ್ನು ನಗರಪಾಲಿಕೆ ಆರೋಗ್ಯಾಧಿಕಾರಿ ಡಾ.ನಾಗರಾಜು, ನೇತ್ರ ತಜ್ಞ, ಸಮಾಜಸೇವಕ ಡಾ.ವಿದ್ಯಾಶಂಕರ್ ವಿತರಿಸಿದರು.

ಉಪಹಾರದ ವ್ಯವಸ್ಥೆಯನ್ನು ಏ.14ರವರೆಗೂ ಸೇವಾಸಂಘದ ವತಿಯಿಂದ ವ್ಯವಸ್ಥೆ ಮಾಡಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: