ಮೈಸೂರು

ಪ್ರಧಾನಿ ಮೋದಿ ದೀಪಯಾನಕ್ಕೆ ಬೆಂಬಲ ನೀಡಿದ ಮಾಜಿ ಸಚಿವ ಹೆಚ್.ವಿಶ್ವನಾಥ್

ಮೈಸೂರು,ಏ.4:-  ಕೊರೋನಾ‌ ಮಹಾಮಾರಿ ಮಾನವ ಕುಲವನ್ನೇ ನಡುಗಿಸುತ್ತಿದೆ. ಈ‌ ಮಹಾಮಾರಿಯನ್ನು ಒಟ್ಟಾಗಿ ಎದುರಿಸಬೇಕು ಅಂತ ಪ್ರಧಾನಿ ಮೋದಿ ದೀಪಯಾನಕ್ಕೆ ಕರೆ ಕೊಟ್ಟಿದ್ದಾರೆ‌ ಎಂದು ಮಾಜಿ ಸಚಿವ, ಬಿಜೆಪಿ ಮುಖಂಡ ಹೆಚ್.ವಿಶ್ವನಾಥ್ ವಿಡಿಯೋ ಸಂದೇಶದಲ್ಲಿ ತಿಳಿಸಿದ್ದಾರೆ.

ಇಂದು ವಿಡಿಯೋ ಸಂದೇಶದ ಮೂಲಕ   ಬೆಂಬಲ ವ್ಯಕ್ತಪಡಿಸಿರುವ  ಅವರು ಬೆಳಕು ನಮ್ಮ‌ ಬದುಕಿನ ಭವಿಷ್ಯದ ಸಂಕೇತ. ಜಾತಿ‌ ಮತ ಧರ್ಮವನ್ನು ಬದಿಗಿಟ್ಟು ಎಲ್ಲರು ದೀಪಯಾನದಲ್ಲಿ ಭಾಗವಹಿಸಿ. ಭವಿಷ್ಯ ಸದಾ ಬೆಳಕಾಗಿರಬೇಕು ಎಂಬ ಸಂದೇಶವನ್ನು ಪಾಲಿಸೋಣ ಎನ್ನುವ ಮೂಲಕ ಪ್ರಧಾನಿ ಮೋದಿ ಕರೆಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. (ಕೆ.ಎಸ್,ಎಸ್.ಎಚ್)

 

Leave a Reply

comments

Related Articles

error: