ಪ್ರಮುಖ ಸುದ್ದಿಮನರಂಜನೆ

ಕೊರೋನಾ ವೈರಸ್ ವಿರುದ್ಧದ ಯುದ್ಧ; ಪಿಎಂ ಕೇರ್ಸ್ ನಿಧಿಗೆ ಬಾಲಿವುಡ್ ನಟರಾದ ರಣವೀರ್ ಸಿಂಗ್ ದಂಪತಿ ದೇಣಿಗೆ

ದೇಶ(ನವದೆಹಲಿ)ಏ.4:- ಕೊರೋನಾ  ವೈರಸ್ ಇಡೀ ಜಗತ್ತನ್ನೇ ತಲ್ಲಣಗೊಳಿಸಿದೆ. ಇದರಿಂದ ದೇಶವೇ ಲಾಕ್ ಡೌನ್ ನಲ್ಲಿದ್ದು ಸಾಮಾನ್ಯರು ಸಂಕಷ್ಟದಲ್ಲಿದ್ದಾರೆ.  ಬಾಲಿವುಡ್  ಚಲನಚಿತ್ರ ತಾರೆಯರ ಯಾವ ಚಿತ್ರಗಳೂ ತೆರೆ ಕಾಣುತ್ತಿಲ್ಲ, ಯಾಕೆಂದರೆ ಚಿತ್ರಮಂದಿರವೇ ಬಂದ್ ಆಗಿದೆ.

ಇಂತಹ ಪರಿಸ್ಥಿತಿಯಲ್ಲಿ, ಪ್ರಪಂಚದಾದ್ಯಂತ   ಚಲನಚಿತ್ರ ಕಲಾವಿದರು ತಮ್ಮ ಪ್ರೀತಿಪಾತ್ರರ ಜೊತೆ ಸಮಯ ಕಳೆಯುತ್ತಿದ್ದಾರೆ. ಅದೇ ಸಮಯದಲ್ಲಿ, ಪ್ರಧಾನಿ ಮೋದಿ ಅವರು ಪಿಎಂ ಕೇರ್ಸ್ ನಿಧಿಯ ಕುರಿತು  ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ನೀಡಿದ್ದರು, ಇದರಲ್ಲಿ ಅವರು ನೀಡಿದ ಯಾವುದೇ ಮೊತ್ತವನ್ನು ದೇಶದ ಯಾವುದೇ ವಿಪತ್ತುಗಳ ವಿರುದ್ಧ ಹೋರಾಡಲು ಬಳಸಲಾಗುತ್ತದೆ ಎಂದು ಹೇಳಿದ್ದರು. ಈ ಪ್ರಕಟಣೆಗೆ ಸ್ಪಂದಿಸಿದ  ಅನೇಕ ಬಾಲಿವುಡ್ ತಾರೆಗಳು ಲಕ್ಷಾಂತರ ಕೋಟಿ ದೇಣಿಗೆ ನೀಡಿದ್ದಾರೆ. ಕೊರೋನಾದೊಂದಿಗೆ ನಡೆಯುತ್ತಿರುವ ಯುದ್ಧದಲ್ಲಿ ಗೆಲ್ಲಲು ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ  ಸಹ ಪಿಎಂ ಕೇರ್ಸ್ ನಿಧಿಗೆ ದೇಣಿಗೆ ನೀಡಿದ್ದಾರೆ.

ಪಿಎಂ ಕೇರ್ಸ್ ಫಂಡ್‌ ಗೆ  ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ಅವರು ಎಷ್ಟು ಹಣವನ್ನು ದೇಣಿಗೆ ನೀಡಿದ್ದಾರೆ ಎಂಬ ಬಗ್ಗೆ ಇದುವರೆಗೂ ಯಾವುದೇ ಮಾಹಿತಿ ಬಹಿರಂಗಗೊಂಡಿಲ್ಲ. ರಣವೀರ್ ಸಿಂಗ್ ಮತ್ತು ದೀಪಿಕಾ ಪಡುಕೋಣೆ ತಮ್ಮ ಇನ್ಸ್ಟಾಗ್ರಾಮ್ ಪೋಸ್ಟ್ಗಳಲ್ಲಿ ಕೊರೋನಾ ರಿಲೀಫ್ ಫಂಡ್ಗೆ ದೇಣಿಗೆ ನೀಡುವ ಬಗ್ಗೆ ಮಾತನಾಡಿದ್ದು,   ಪೋಸ್ಟ್  ಹಂಚಿಕೊಳ್ಳುವಾಗ, ಇಬ್ಬರೂ ಪ್ರಸ್ತುತ ಪ್ರಯತ್ನಗಳಲ್ಲಿ ಸಣ್ಣ ಪ್ರಯತ್ನಗಳೂ ಸಹ ಮುಖ್ಯವೆಂದು ಬರೆದಿದ್ದಾರೆ. ಪಿಎಂ-ಕೇರ್ಸ್ ಫಂಡ್‌ಗೆ  ನಮ್ರತೆಯಿಂದ ದೇಣಿಗೆ ನೀಡುವುದಾಗಿ ನಾವು ಪ್ರತಿಜ್ಞೆ ಮಾಡುತ್ತೇವೆ ಮತ್ತು ನೀವೂ ಸಹ ಇದಕ್ಕೆ ಕೊಡುಗೆ ನೀಡುತ್ತೀರಿ ಎಂದು ಭಾವಿಸುತ್ತೇವೆ. ಬಿಕ್ಕಟ್ಟಿನ ಈ ಸಮಯದಲ್ಲಿ ನಾವೆಲ್ಲರೂ ಒಟ್ಟಿಗೆ ಇದ್ದೇವೆ. ಜೈ ಹಿಂದ್! ಎಮದು ಬರೆದುಕೊಂಡಿದ್ದಾರೆ. (ಏಜೆನ್ಸಿಸ್,ಎಸ್.ಎಚ್)

Leave a Reply

comments

Related Articles

error: