ಮೈಸೂರು

ಬಿ ವೈ ವಿಜಯೇಂದ್ರ ಬಳಗದ ವತಿಯಿಂದ ಕಡು ಬಡವರಿಗೆ,ಕೂಲಿ ಕಾರ್ಮಿಕರಿಗೆ ಉಚಿತ ಔಷಧಿ ವಿತರಣೆ

ಮೈಸೂರು,ಏ.4:- ಮೈಸೂರಿನ ಜಯನಗರ, ಬೋಗಾದಿ ಸೇರಿದಂತೆ ಅನೇಕ ಬಡಾವಣೆಯಲ್ಲಿರುವ ಕಡು ಬಡವರಿಗೆ,ಕೂಲಿ ಕಾರ್ಮಿಕರಿಗೆ, ಮನೆಕೆಲಸದವರಿಗೆ ಇಂದು ಉಚಿತವಾಗಿ ಔಷಧಿ ವಿತರಿಸಲಾಯಿತು.

ಬಿ ವೈ ವಿಜಯೇಂದ್ರ ಬಳಗದ ವತಿಯಿಂದ ಮೈಮುಲ್ ನಿರ್ದೇಶಕ ಎಸ್‌.ಸಿ.ಅಶೋಕ್ ನೇತೃತ್ವದಲ್ಲಿ ಕಡು ಬಡವರಿಗೆ, ನಿರ್ಗತಿಕರಿಗೆ, ಔಷಧಿ ವಿತರಿಸಲಾಯಿತು.

ಇದೇ ಸಂದರ್ಭದಲ್ಲಿ ಮಾತನಾಡಿದ ಅವರು ವಿಜಯೇಂದ್ರ ಬಳಗದ ವತಿಯಿಂದ ಕಾರ್ಯಕರ್ತರು ಸೇರಿ ಕಡು ಬಡವರಿಗೆ,ಕೂಲಿ ಕಾರ್ಮಿಕರಿಗೆ, ಮನೆಗೆಲಸ ಮಾಡುವವರಿಗೆ ಔಷಧಿ ವಿತರಿಸಲಾಗಿದೆ. ಮೈಸೂರು ನಗರ ಹಾಗೂ ತಾಲೂಕು ಮಟ್ಟದಲ್ಲಿ ಔಷಧಿ ವಿತರಿಸುತ್ತಿದ್ದೇವೆ. ಏಪ್ರಿಲ್ 14 ವರಗೆ ಔಷಧಿ ವಿತರಿಸಲಾಗುವುದು ಎಂದು ಮಾಹಿತಿ ನೀಡಿದರು.

ಇದೇ ಸಂದರ್ಭ ಲಕ್ಷ್ಮೀದೇವಿ, ಆನಂದ್,ನಿಖಿಲ್,ಜೆಸ್ವಿನ್,ನಂದೀಶ್,ಅಪ್ಪು ಸೇರಿದಂತೆ ಇತರರು ಭಾಗಿಯಾಗಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: