ಮೈಸೂರು

ಹಸಿದವರಿಗೆ, ನಿರ್ಗತಿಕರಿಗೆ ಉಪಹಾರ ನೀಡಿದ ಯುವಕರ ತಂಡ

ಮೈಸೂರು,ಏ.4:-   ಕೊರೋನಾ ವೈರಸ್ ಸೋಂಕು ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಮೈಸೂರು ಜಿಲ್ಲೆಯಲ್ಲಿ ಲಾಕ್ ಡೌನ್ ಘೋಷಿಸಲಾಗಿದ್ದು, ನಿರ್ಗತಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಅವರಿಗಾಗಿಯೇ ನಗರದ ಯೂಥ್ ಹಾಸ್ಟೇಲ್ ಸೇರಿದಂತೆ ವಿವಿಧೆಡೆ ಗಂಜಿ ಕೇಂದ್ರಗಳನ್ನು ತೆರೆಯಲಾಗಿದೆ. ನಗರದ ಯುವಕರ ತಂಡವೊಂದು ಹಸಿದವರಿಗೆ, ನಿರ್ಗತಿಕರಿಗೆ ಉಪಹಾರ ನೀಡಿದೆ.

ನಗರದ ಯೂತ್ ಹಾಸ್ಟೆಲ್ ನ ಗಂಜಿ ಕೇಂದ್ರ, ಮಾರುಕಟ್ಟೆ, ನಗರದ ವಿವಿಧೆಡೆ ಸುಮಾರು 500 ಮಂದಿಗೆ ಇಂದು ಉಪಹಾರ ನೀಡಿದೆ. ಈ ಸಂದರ್ಭ ಪಿ.ಸಚಿನ್, ವಿ.ಎನ್.ತೇಜಸ್, ಜೆ.ನಂದಿನಿ, ವಿ.ಎಸ್.ಮನೋಜ್ ಉಪಸ್ಥಿತರಿದ್ದರು.

Leave a Reply

comments

Related Articles

error: