ಮೈಸೂರು

ಸಾಮಾಜಿಕ ಸೇವೆಯಲ್ಲಿ ಮುಂದಿರುವ ಅಕ್ಷಯ ಆಹಾರ ಫೌಂಡೇಷನ್ : ನಿರಾಶ್ರಿತರಿಗೆ ಆಹಾರ ವಿತರಣೆ

ಮೈಸೂರು,.ಏ.4:- ಕೊರೋನಾ ವೈರಸ್ ಹರಡುವುದನ್ನು ತಡೆಯುವ ಉದ್ದೇಶದಿಂದ ದೇಶದಲ್ಲಿ 21 ದಿನಗಳ ಲಾಕ್‌ಡೌನ್ ಘೋಷಿಸಲಾಗಿದೆ . ಆದರೆ ಇದು ಅನೇಕರಿಗೆ ಬದುಕಿನ ಪ್ರಶ್ನೆಯಾಗಿದೆ . ಈ ರಾಷ್ಟ್ರವ್ಯಾಪಿ ಕರ್ಪ್ಯೂ ಘೋಷಣೆ ಲಕ್ಷಾಂತರ ಜನರನ್ನು ನಿರುದ್ಯೋಗಿಗಳಾಗಿ , ಮನೆಯಿಲ್ಲದವರನ್ನಾಗಿ ಮತ್ತು ಆಹಾರವಿಲ್ಲದವರನ್ನಾಗಿ ಮಾಡಿದೆ . ಆರೋಗ್ಯ ಸಮಸ್ಯೆ ಮತ್ತು ನಂತರದ ಆರ್ಥಿಕ ಕುಸಿತವು ವಿಶೇಷವಾಗಿ ದೈನಂದಿನ ಕೂಲಿ ಕಾರ್ಮಿಕರು ಮತ್ತು ವಲಸೆ ಕಾರ್ಮಿಕರ ನಿದ್ದೆಗೆಡಿಸಿದೆ . ಈ ಸಮಯದಲ್ಲಿ ದೀನದಲಿತ ಮತ್ತು ಅತ್ಯಂತ ಹಿಂದುಳಿದವರ ಅಗತ್ಯಗಳನ್ನು ಪೂರೈಸಲು ಹಲವಾರು ಸಂಘ ಸಂಸ್ಥೆಗಳು ಸೇವೆಗೆ ಮುಂದಾಗಿವೆ ಅದರಲ್ಲಿ ಮುಖ್ಯವಾಗಿ ಅಕ್ಷಯ ಆಹಾರ ಫೌಂಡೇಷನ್ ಮುಂಚೂಣಿಯಲ್ಲಿದೆ ,

ಮೈಸೂರಿನಲ್ಲಿರುವ ಹಲವಾರು ಸ್ಲಂ ಗಳು , ಕೆ ಆರ್ ಆಸ್ಪತ್ರೆ, ಬಸ್ ಸ್ಟ್ಯಾಂಡ್ ಬಳಿ , ಹೀಗೆ ಸಾಕಷ್ಟು ಭಾಗಗಳಲ್ಲಿ ಕಾಣ ಸಿಗುವ ನಿರ್ಗತಿಕರಿಗೆ , ನಿರಾಶ್ರಿತರಿಗೆ ಅನ್ನ ನೀಡುವ ಕೆಲಸವನ್ನು ಅಕ್ಷಯ ಆಹಾರ ಫೌಂಡೇಶನ್ ‌ಸಂಸ್ಥಾಪಕ ರಾಜೇಂದ್ರ ಅವರು ಮಾಡುತ್ತ ಬಂದಿದ್ದಾರೆ. ಈ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ಇನ್ನಷ್ಟು ಚುರುಕಾಗಿ ಕೆಲಸ ಮಾಡುತ್ತಿದ್ದಾರೆ , ಕುವೆಂಪು ನಗರದಲ್ಲಿ ನಗರ ಪಾಲಿಕೆ ಸದಸ್ಯ ಶಿವಕುಮಾರ್ ಅವರ ಸಹಕಾರದೊಂದಿಗೆ ಆಹಾರ ಕೇಂದ್ರವನ್ನು ತೆರೆಯಲಾಗಿದ್ದು ಅಲ್ಲಿಯೂ ಸಹ ಆಹಾರ ವಿತರಣಾ ಕಾರ್ಯ ನಡೆಸುತ್ತಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: