ಮೈಸೂರು

ಕೋವಿಡ್ – 19  :  ಗೋಪಾಲಪುರ ಗ್ರಾಮಸ್ಥರಿಂದ ಆಹಾರ ಧಾನ್ಯ ದೇಣಿಗೆ

ಮೈಸೂರು, ಏ.4:- ಕೋವಿಡ್ 19 ಹರಡದಂತೆ ತಡೆಯಲು ಮುನ್ನೆಚ್ಚರಿಕೆಯಾಗಿ ರಾಜ್ಯವು ಲಾಕ್‍ಡೌನ್ ಆಗಿರುವ ಹಿನ್ನೆಲೆ ಯಲ್ಲಿ ತೊಂದರೆಗೊಳಗಾದವರ ಪರಿಹಾರಕ್ಕಾಗಿ ಜಯಪುರ ಹೋಬಳಿಯ ಗೋಪಾಲಪುರ ಗ್ರಾಮದ ಗ್ರಾಮಸ್ಥರು ಆರು ಕ್ವಿಂಟಾಲ್ ರಾಗಿ ಹಾಗೂ ಆರು ಕ್ವಿಂಟಾಲ್ ಅಕ್ಕಿಯನ್ನು ಸಂಗ್ರಹಿಸಿ ಕಂದಾಯ ಅಧಿಕಾರಿ ಕೆ.ಎಸ್.ಕುಬೇರ್, ರಾಜಸ್ಥ ನಿರೀಕ್ಷಕರಾದ ಎಸ್. ಪ್ರಭಾಕರ್ ಹಾಗೂ ಗ್ರಾಮ ಲೆಕ್ಕಾಧಿಕಾರಿ ಎನ್.ಎಸ್. ಪುರುಷೋತ್ತಮ್ ಮುಖಾಂತರ ಆಹಾರ ಧಾನ್ಯಗಳ ಸ್ವೀಕಾರ ಕೇಂದ್ರಕ್ಕೆ ನೀಡಿರುತ್ತಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: