ಮೈಸೂರು

ನಾಳೆ ಸಂಜೆ 6ಗಂಟೆಯಿಂದ ಲಾಕ್ ಡೌನ್ ಮುಗಿಯುವವರೆಗೂ  ಪ್ರತಿದಿನ ಸಂಜೆ 6ಗಂಟೆ ನಂತರ ಮಳಿಗೆಗಳನ್ನು ತೆರೆಯಲು ಅವಕಾಶವಿಲ್ಲ : ಡಾ.ಚಂದ್ರಗುಪ್ತ ಆದೇಶ

ಮೈಸೂರು, ಏ.4:- ನಾಳೆ ಸಂಜೆ 6ಗಂಟೆಯಿಂದ ಲಾಕ್ ಡೌನ್ ಮುಗಿಯುವವರೆಗೂ  ಪ್ರತಿದಿನ ಸಂಜೆ 6ಗಂಟೆ ನಂತರ ಯಾವುದೇ ದಿನಸಿ ಅಂಗಡಿ, ತರಕಾರಿ ಅಂಗಡಿ,  ಮಳಿಗೆಗಳನ್ನು ತೆರೆಯಲು ಅವಕಾಶವಿಲ್ಲ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ಆದೇಶ ಹೊರಡಿಸಿದ್ದಾರೆ.

ವಾರ್ತಾ ಮತ್ತು ಸಂಪರ್ಕ ಇಲಾಖೆಯ ಫೇಸ್ ಬುಕ್ ಪೇಜ್ ನಲ್ಲಿ ನೇರ ಮಾಹಿತಿ ನೀಡಿದ ಅವರು  ಕಳೆದ ಹತ್ತು ದಿನಗಳಿಂದ ಲಾಕ್ ಡೌನ್ ಕಂಡೀಷನ್ ಪಾಲೋ ಮಾಡ್ತಿದ್ದೀರಿ, ಹಲವು ಬಾರಿ ನಾವು ಕಠಿಣ ಕ್ರಮಗಳನ್ನು ಕೈಗೊಳ್ಳಲು ಮುಂದಾಗಿದ್ದುಂಟು. ಸುಮಾರು 500ಕ್ಕೂ ಹೆಚ್ಚು ವಾಹನಗಳನ್ನು ನಾವು ಸೀಜ್ ಮಾಡಿದ್ದೀವಿ. ಆದರೂ ಇನ್ನೂ ಕೆಲವರು ಬರುತ್ತಿದ್ದಾರೆ. ದಿನಸಿ ಅಂಗಡಿಗಳು, ಕಿರಾಣಿ ಅಂಗಡಿಗಳು, ತಳ್ಳುವ ಗಾಡಿಗಳ 24* 7 ನಿಮ್ಮ ಅನುಕೂಲಕ್ಕಿರಲಿ ಅಂತ ನಿಮಗೆ ಅನುಕೂಲ   ಮಾಡಿಕೊಟ್ಟಿದ್ವಿ. ಆದರೆ ನೀವು ಪಾಸಿಟಿವ್ ಪ್ರಕರಣ ಹೆಚ್ಚಾಗುತ್ತಿದ್ದರೂ ಸೀರಿಯಸ್ ಆಗಿ ತೆಗೆದುಕೊಳ್ಳದೇ ಸಂಜೆಯ ವೇಳೆ ಹೊರಗಡೆ ತಿರುಗಾಡುತ್ತಿರುವುದು ಕಂಡು ಬಂದಿದೆ. ಹಾಗಾಗಿ ನಾನು ಆದೇಶ ಮಾಡ್ತಿದ್ದೇನೆ. ನಾಳೆ ಸಂಜೆ 6ಗಂಟೆಯಿಂದ ಲಾಕ್ ಡೌನ್ ಮುಗಿಯುವವರೆಗೂ ಅಂದರೆ ಏಪ್ರೀಲ್ 14ರವರೆಗೂ ಪ್ರತಿದಿನ ಸಂಜೆ 6ಗಂಟೆ ನಂತರ ಮೆಡಿಕಲ್ ಶಾಪ್ಸ್, ಹಾಸ್ಪಿಟಲ್ಸ್, ಹೋಂಡೆಲಿವರಿಗೆ ಸಂಬಂಧಿಸಿದ ಕಿಚನ್ಸ್ ಏನಿದೆ ಅವುಗಳನ್ನು ಹೊರತುಪಡಿಸಿ, ಎಲ್ಲಾ ದಿನಸಿ ಅಂಗಡಿ, ತರಕಾರಿ ಹಣ್ಣು ಮಾರುವ ಅಂಗಡಿಗಳು, ಎಲ್ಲಾ ಕೂಡ ಬಂದ್ ಮಾಡಲು ಆದೇಶ ಹೊರಡಿಸಿದ್ದೇನೆ. ಹಾಗಾಗಿ ಎಲ್ಲರೂ ಕೂಡ ಈ ಆದೇಶ ಪಾಲಿಸಬೇಕು. ಯಾರೂ ಕೂಡ ಸಂಜೆ 6ಗಂಟೆ ನಂತರ  ಮಳಿಗೆಗಳನ್ನು ತೆರೆಯಲು ಅವಕಾಶವಿಲ್ಲ. ಮನೆಯಿಂದ ಹೊರಗೆ ಅನಗತ್ಯವಾಗಿ ಬರುವುದಕ್ಕೂ ಅವಕಾಶವಿಲ್ಲ.  ಈಗಾಗಲೇ ನಾವು ಈ ಬಗ್ಗೆ ಆದೇಶ ಹೊರಡಿಸಲಾಗಿದೆ. ತೆರೆದಲ್ಲಿ  ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: