ಮೈಸೂರು

ಮೈಸೂರಿನಲ್ಲಿ  ಕೊರೋನಾ  ವೈರಸ್ ಸೋಂಕಿತರ ಸಂಖ್ಯೆ 28ಕ್ಕೇರಿದೆ : ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ

ಮೈಸೂರು,ಏ.4:- ಮೈಸೂರಿನಲ್ಲಿ  ಕೊರೋನಾ  ವೈರಸ್ ಸೋಂಕಿತರ ಸಂಖ್ಯೆ 28ಕ್ಕೇರಿದೆ ಎಂದು ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್ ಮಾಹಿತಿ ನೀಡಿದರು.

ವಾರ್ತಾ ಮತ್ತು ಸಂಪರ್ಕ ಇಲಾಖೆಯ ಫೇಸ್ ಬುಕ್ ಪೇಜ್ ನಲ್ಲಿ ನೇರ ಮಾಹಿತಿ ನೀಡಿದ ಅವರು ಇಂದು ಒಂದೇ ದಿನ ಏಳು ಪ್ರಕರಣ ಪತ್ತೆಯಾಗಿದ್ದು, ಎರಡು ಜ್ಯುಬಿಲಿಯೆಂಟ್ ಕಂಪನಿಯ ಪಾಸಿಟಿವ್ ಬಂದ ವ್ಯಕ್ತಿಗಳ ಜೊತೆ ಪ್ರೈಮರಿ ಸಂಪರ್ಕಕ್ಕೆ ಬಂದವರದ್ದಾಗಿದ್ದು, ಇನ್ನು ಐದು ದೆಹಲಿಯವರು ತಬ್ಲಿಘಿ ಜಮಾಅತ್ ಗೆ ಸೇರಿದವರು. ದೆಹಲಿಯಿಂದ ಜನವರಿ ಕೊನೆಗೆ ಮೈಸೂರಿಗೆ ಬಂದಿದ್ದಾರೆ.  ಅವರು ಫೆಬ್ರವರಿ ಫುಲ್ ಮೈಸೂರಿನಲ್ಲಿದ್ದು, ಮಾರ್ಚ್ 13ರಿಂದ 30ರವರೆಗೆ  ಮಂಡ್ಯದಲ್ಲಿದ್ದರು. ಮಾರ್ಚ್ 30ರಂದು ಬಾರ್ಡರ್ ಲ್ಲಿ ಸ್ಥಳೀಯರಲ್ಲ ಅಂತ ಚೆಕ್ ಮಾಡಿ ಕ್ವಾರೆಂಟೈನ್ ಮಾಡಿ ಟೆಸ್ಟ್ ಮಾಡಿಸಿದಾಗ ಐದು ಮಂದಿಗೆ ಈಗ ಪಾಸಿಟಿವ್ ಬಂದಿದೆ. ಇವರಿಗೆಲ್ಲಿಂದ ಬಂದಿರಬಹುದು ಎನ್ನುವ ಕುರಿತು ಇನ್ಸಪೆಕ್ಷನ್ ನಡೀತಿದೆ. ತನಿಖೆ ನಡೆಯುತ್ತಿದೆ. ಮೊದಲೆರಡು ಫಾರಿನ್ ರಿಟರ್ನ್ ಗಳದ್ದು ಕೇಸ್ ಮುಗಿಯುವ ಹಂತದಲ್ಲಿದೆ. ಅವರಿಗೆ ಟೆಸ್ಟ್ ಮಾಡಿ ನೆಗೆಟಿವ್ ಬಂದರೆ ಡಿಸ್ಚಾರ್ಜ್ ಮಾಡಲಾಗುತ್ತದೆ ಎಂದು ತಿಳಿಸಿದರು.

ಒಟ್ಟು 2833 ಜನ ನಾವು ಒಬ್ಸರ್ವ್ ಮಾಡಿದ್ದೀವಿ, ಅದರಲ್ಲಿ 1626ಜನ ಹೋಂ ಕ್ವಾರೆಂಟೈನ್ ನಲ್ಲಿದ್ದಾರೆ. 1179ಜನ ಹೋಂ ಕ್ವಾರೆಂಟೈನ್ ಕಂಪ್ಲೀಟ್ ಮಾಡಿದ್ದಾರೆ ಎಂದು ತಿಳಿಸಿದರು.

ವಸ್ತು ಪ್ರದರ್ಶನ ಮೈದಾನದಲ್ಲಿ ರೈತರ ಸಂತೆ ಸ್ಥಳಾಂತರಗೊಂಡಿದೆ. ಅಲ್ಲಿ ಡಿಸ್ ಇನ್ಫೆಕ್ಷ ನ್ ಟನಲ್ (ಸುರಂಗ) ಮಾಡಲಾಗಿದೆ. ಅದಕ್ಕೆ ಸಾಂಕೇತಿಕವಾಗಿ ಇಂದು ಚಾಲನೆ ನೀಡಲಾಗಿದೆ. ಅಲ್ಲಿ ಡಿಸ್ ಇನ್ಫೆಕ್ಷ ನ್ ಸೊಲ್ಯುಶನ್ ಸಿಂಪಡಿಸುವ ಸ್ಪಿಂಕ್ಲರ್ ಮಶಿನ್ ಇದೆ. ಸೋಡಿಯಂ ಹೈಪೋಕ್ಲೋರೈಟ್ ಮಿಶ್ರಿತ ದ್ರಾವಣ ಸಿಂಪಡಿಸಲಾಗುತ್ತದೆ. 10ಅಡಿ ಉದ್ದದ ಟನೆಲ್ ಇದ್ದು, ಸಾರ್ವಜನಿಕರು ಬರುವವರು ಕಡ್ಡಾಯವಾಗಿ ಅದರ ಮೂಲಕ   ಹಾದು ಹೋಗಬೇಕು. ಮುಖ ಕೆಳಗೆ ಮಾಡಿ ಕೈಎರಡು ಮೇಲಕ್ಕೆ ಮಾಡಿ ಹೋದರೆ ಅದು ಸಂಪೂರ್ಣ ಶರೀರಕ್ಕೆ ಬರತ್ತೆ.  ರಮೇಶ್ ಕಿಕ್ಕೇರಿ ಮತ್ತು ಹನುಮಂತು ಅವರು ಇಬ್ಬರೂ ಸೇರಿ ಮಾಡಿಕೊಟ್ಟಿದ್ದಾರೆ. ಕೆ.ಆರ್.ಮಾರುಕಟ್ಟೆ, ಲಲಿತಾದ್ರಿಪುರದಲ್ಲೂ  ಇದೇ ಯೋಜನೆ ಜಾರಿಗೆ ಬರಲಿದೆ. ಕಡ್ಡಾಯವಾಗಿ ಸಾರ್ವಜನಿಕರು ಅದರ ಮೂಲಕವೇ ಹೋಗಬೇಕು ಎಂದರು.  ಕೆಲವು ಏರಿಯಾದಲ್ಲಿ ಜನ ಅನಗತ್ಯವಾಗಿ ಸಂಜೆ ಹೊತ್ತು  ಓಡಾಡ್ತಿದ್ದಾರೆ ಎಂದು ತಿಳಿದು ಬಂದಿದೆ. ಸಾರ್ವಜನಿಕರು ಗಂಭೀರವಾಗಿ ತೆಗೆದುಕೊಂಡು ಮನೆಯಲ್ಲಿಯೇ ಇರಿ ಎಂದರು.

ಕೆಲವರು ಟೆಸ್ಟಿಂಗ್ ಕೆಪಾಸಿಟಿ  ಬಗ್ಗೆ  ಹಲವು ಅನುಮಾನ ವ್ಯಕ್ತಪಡಿಸಿದ್ದಾರೆ. ಯಾವುದೇ ಅನುಮಾನ ಬೇಡ. ಆಟೋಮೇಟೆಡ್ ಆರ್ ಎನ್ ಎ ಎಕ್ಸ್ಟ್ರಾಕ್ಟರ್  ಸರ್ಕಾರದಿಂದ 100 ಕಿಟ್ಸ್ ಕೊಟ್ಟಿದ್ದಾರೆ. ಬೇಗನೆ ಟೆಸ್ಟ್  ಮಾಡಲು ಅನುಕೂಲ ಮಾಡಿಕೊಡತ್ತೆ. ಹಲವು ಜನ ದಾನಿಗಳು ಮುಂದೆ ಬರ್ತಿದ್ದಾರೆ. ಪ್ರಾವಿಶನ್ಸ್ ಕೊಡಬಹುದು. ಅದನ್ನು ಪಾಲಿಕೆಗೆ ಕೊಡಬಹುದು. ಮೆಡಿಕಲ್ ಆಗಿ ನೀಡುವುದಿದ್ದರೆ ಡಿಹೆಚ್ ಓ ಅವರ ಕಛೇರಿಗೆ ನೀಡಿ. ಕ್ಯಾಶ್ ಸಿಎಂ ಮತ್ತು ಪಿಎಂ ನಿಧಿಗೆ ನೀಡಬೇಕು. ರೇಶನ್ ನಿಮ್ಮ ಮನೆ ಬಾಗಿಲಿಗೆ ಬರತ್ತೆ.  ಕೆಎಂ ಎಫ್ ನವರು ಹಾಲನ್ನು ನೀಡುತ್ತಿದ್ದಾರೆ. ಅದನ್ನು ತಾಳ್ಮೆಯಿಂದ ಪಡೆದುಕೊಳ್ಳಿ ಎಂದು ತಿಳಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: