ಪ್ರಮುಖ ಸುದ್ದಿ

ವಿರಾಜಪೇಟೆಯಲ್ಲಿ ಗುಜರಾತ್ ಮೂಲದ 9 ಮಂದಿ ಪತ್ತೆ : ದ್ರವದ ಮಾದರಿ ಪ್ರಯೋಗಾಲಯಕ್ಕೆ ರವಾನೆ

ರಾಜ್ಯ( ಮಡಿಕೇರಿ) ಏ.4 :- ತಬ್ಲಿಘಿ ಜಮಾಅತ್‍ನ ಮತ್ತೊಂದು ವಿಭಾಗವಾದ ‘ಶುರ ತಬ್ಲಿಘಿ ಜಮಾಅತ್’ನ ಮುಂಬೈನ ಸಮಾವೇಶದಲ್ಲಿ ಪಾಲ್ಗೊಂಡು ವೀರಾಜಪೇಟೆಯಲ್ಲಿ ನೆಲೆಸಿದ್ದ ಗುಜರಾತ್ ಮೂಲದ 9 ಮಂದಿಯನ್ನು ಕೊಡಗು ಜಿಲ್ಲಾ ಪೊಲೀಸರು ಪತ್ತೆ ಹಚ್ಚಿ ಜಿಲ್ಲಾ ಕೇಂದ್ರದಲ್ಲಿನ ಕ್ವಾರಂಟೈನ್‍ಗೆ ಒಳಪಡಿಸಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್ ಅವರು ಈ ಕುರಿತು ತಮ್ಮ ಕಛೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿ, ಕ್ವಾರಂಟೈನ್‍ಗೆ ಒಳಪಡಿಸಿದ ಒಂಭತ್ತು ಮಂದಿ ಹಾಗೂ ಅವರಿಗೆ ಆಶ್ರಯ ನೀಡಿದ ಮನೆಯಾತನನ್ನು ಕ್ವಾರಂಟೈನ್‍ಗೆ ಒಳಪಡಿಲಾಗಿದೆ. ಇವರ ಗಂಟಲಿನ ದ್ರವದ ಮಾದರಿಗಳನ್ನು ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದರು.
ಶುರ ತಬ್ಲಿಘಿ ಜಮಾಅತ್‍ನ ಕೇಂದ್ರ ಸ್ಥಾನ ಮುಂಬೈ ಆಗಿದ್ದು, ಅಲ್ಲಿ ಜನವರಿಯಲ್ಲಿ ನಡೆದ ಸಮಾವೇಶದಲ್ಲಿ ಪಾಲ್ಗೊಂಡಿದ್ದವರಲ್ಲಿ 7 ಮಂದಿ ಫೆ.2 ರಂದು ವೀರಾಜಪೇಟೆಯ ಶುರ ತಬ್ಲಿಘಿಗೆ ಒಳಪಟ್ಟ ಜಮಾಅತ್‍ಗೆ ಬಂದು ಧರ್ಮಕ್ಕೆ ಸಂಬಂಧಿಸಿದ 40 ದಿನಗಳ ತರಬೇತಿಗೆ ಒಳಪಟ್ಟಿದ್ದಾರೆ. ಉಳಿದ ಇಬ್ಬರು ಮಾ.15 ರಂದು ಇವರನ್ನು ಸೇರಿಕೊಂಡಿದ್ದರು ಎಂದು ಎಸ್‍ಪಿ ಹೇಳಿದರು.
ಮುಂಬೈ ಸಮಾವೇಶದಲ್ಲಿ ಪಾಲ್ಗೊಂಡ 9 ಮಂದಿ ವೀರಾಜಪೇಟೆಯ ಒಂದು ಮನೆಯಲ್ಲಿ ವಾಸವಿದ್ದು, ಜಿಲ್ಲೆಯಲ್ಲಿ ಲಾಕ್ ಡೌನ್ ನಿಷೇದಾಜ್ಞೆ ಜಾರಿಯಲ್ಲಿದ್ದ ಹಿನ್ನೆಲೆ ಅವರಿಗೆ ಹಿಂದಿರುಗಲು ಸಾಧ್ಯವಾಗಿರಲಿಲ್ಲ. ಇವರೆಲ್ಲರು ಒಂದು ಮನೆಯಲ್ಲಿ ಒಟ್ಟಾಗಿ ವಾಸವಿದ್ದರು. ನಿನ್ನೆ ರಾತ್ರಿ ಇವರನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ ಎಸ್‍ಪಿ, ಮುಂಬೈನಲ್ಲಿ ಪಾಲ್ಗೊಂಡಿದ್ದ ಸಮಾವೇಶದಿಂದ ಕೊರೊನಾ ಸೋಂಕು ಹರಡಿರುವ ಬಗ್ಗೆ ಯಾವುದೇ ಮಾಹಿತಿಗಳಿಲ್ಲ ಎಂದರು. ಆದರೂ ಮುನ್ನೆಚ್ಚರಿಕಾ ಕ್ರಮವಾಗಿ ಇವರುಗಳನ್ನು ಕ್ವಾರಂಟೈನ್‍ಗೆ ಒಳಪಡಿಸಿ ನಿಗಾವಹಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
ಮಾಹಿತಿ ನೀಡಿಲ್ಲ
ಶುರ ತಬ್ಲಿಘಿ ಸಮಾವೇಶದಲ್ಲಿ ಪಾಲ್ಗೊಂಡು ವೀರಾಜಪೇಟೆಯಲ್ಲಿ ನೆಲೆಸಿದ್ದ 9 ಮಂದಿಯ ಬಗ್ಗೆ ಅವರಿಗೆ ಆಶ್ರಯ ನೀಡಿದ ವ್ಯಕ್ತಿ ಪೊಲೀಸರಿಗೆ ಯಾವುದೇ ಮಾಹಿತಿಯನ್ನು ನೀಡಿಲ್ಲ. ಆದರೆ, ಖಾಸಗಿ ವೈದ್ಯರೊಬ್ಬರ ಸಲಹೆಯಂತೆ ಮನೆಯಲ್ಲೆ ಕ್ವಾರಂಟೈನ್‍ಗೆ ಒಳಗಾಗಿದ್ದಾಗಿ ತಿಳಿಸಿದ್ದಾನೆ. ಈ ಬಗ್ಗೆ ಪರಿಶೀಲನೆ ನಡೆಯುತ್ತಿದ್ದು, ಸಮರ್ಪಕ ಮಾಹಿತಿ ದೊರಕದಿದ್ದಲ್ಲಿ ಕಾನೂನಿನ ಅನ್ವಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಡಾ.ಸುಮನ್ ಡಿ. ಪನ್ನೇಕರ್ ತಿಳಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: