ಪ್ರಮುಖ ಸುದ್ದಿ

ಹಣ ಪಡೆಯುತ್ತಿದ್ದ ಮೂವರು ಪೊಲೀಸರ ಅಮಾನತು

ರಾಜ್ಯ( ಮಡಿಕೇರಿ) ಏ.4 :- ಕೊರೋನಾ ಹಿನ್ನೆಲೆ ಲಾಕ್‍ಡೌನ್ ಆದೇಶವಿದ್ದರೂ ಕೊಡಗಿನ ಗಡಿಭಾಗ ಮಾಕುಟ್ಟ ಚೆಕ್‍ಪೋಸ್ಟ್‍ನಲ್ಲಿ ಹಣ ಸ್ವೀಕರಿಸಿ ವಾಹನಗಳನ್ನು ಬಿಡುತ್ತಿದ್ದ ಮೂವರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತುಗೊಳಿಸಿರುವುದಾಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ. ಪನ್ನೇಕರ್ ತಿಳಿಸಿದ್ದಾರೆ.
ಗಡಿ ಚೆಕ್ ಪೋಸ್ಟ್ ಗಳನ್ನು ಮುಚ್ಚಲಾಗಿದ್ದರೂ ಮೈಸೂರಿನಿಂದ ಕಣ್ಣೂರಿಗೆ ತರಕಾರಿಗಳನ್ನು ಸರಬರಾಜು ಮಾಡುವ ವಾಹನಗಳ ಚಾಲಕರಿಂದ ಹಣ ಪಡೆದು ವಾಹನಗಳನ್ನು ಚೆಕ್ ಪೋಸ್ಟ್ ಮೂಲಕ ಹಾದು ಹೋಗಲು ಈ ಪೊಲೀಸ್ ಸಿಬ್ಬಂದಿಗಳು ಅವಕಾಶ ಮಾಡಿ ಕೊಟ್ಟಿದ್ದರು. ಈ ಬಗ್ಗೆ ದೊರೆತ ಖಚಿತ ಮಾಹಿತಿ ಮತ್ತು ಸಾಕ್ಷ್ಯವನ್ನು ಆಧರಿಸಿ ಓರ್ವ ಎಎಸ್‍ಐ ಹಾಗೂ ಇಬ್ಬರು ಪೊಲೀಸ್ ಸಿಬ್ಬಂದಿಗಳನ್ನು ಅಮಾನತು ಮಾಡಿರುವುದಾಗಿ ತಿಳಿಸಿದರು. (ಕೆಸಿಐ,ಎಸ್.ಎಚ್)

Leave a Reply

comments

Related Articles

error: