ಮೈಸೂರು

ಜನಸ್ಪಂದನಾ ಟ್ರಸ್ಟ್  ವತಿಯಿಂದ ಆಹಾರ ವಿತರಿಸಿದ ಮಾಜಿ ಶಾಸಕ ಎಂ.ಕೆ.ಸೋಮಶೇಖರ್

ಮೈಸೂರು, ಏ.5:- ಕೋವಿಡ್ -19 ಲಾಕ್ ಡೌನ್ ಹಿನ್ನೆಲೆಯಲ್ಲಿ  13ದಿನ  ಬಡವರು, ಕೂಲಿ ಕಾರ್ಮಿಕರು ಇರುವ ರಾಜೀವ್ ಗಾಂಧಿ ಕಾಲೋನಿ ಹಾಗೂ ಅಶೋಕಪುರಂ ನಲ್ಲಿ 2000ಕ್ಕೂ ಅಧಿಕ ಜನರಿಗೆ  ಇಂದು ಮಾಜಿ ಶಾಸಕ ಎಂ.ಕೆ.ಸೋಮಶೇಖರ್ ಆಹಾರ ವಿತರಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕರಾದ   ಎಂ ಕೆ ಸೋಮಶೇಖರ್ ,ಮಾಜಿ ಪಾಲಿಕೆ ಸದಸ್ಯರಾದ ಪ್ರಭುಮೂರ್ತಿ, ಅಶೋಕಪುರಂ ಪೊಲೀಸ್ ಠಾಣೆ ಪೊಲೀಸ್ ವೃತ್ತ ನಿರೀಕ್ಷಕರಾದ ಸಿದ್ದರಾಜು,ಕಾಂಗ್ರೆಸ್ ಮುಖಂಡರಾದ ಜೋಗಿ ಮಹೇಶ್,   ಬ್ಲಾಕ್ ಅಧ್ಯಕ್ಷರಾದ ಶ್ರೀಧರ್,ಸಮಾಜ ಸೇವಕರಾದ ಮಂಜು,ಮಧು,ಶಂಕರ್ ಹಾಗೂ ಗುಣಶೇಖರ್,ವಿಶ್ವ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: