ಮೈಸೂರು

ನಗರದ ವಿವಿಧೆಡೆ ಹಸುಗಳಿಗೆ ಜೋಳದ ತೆನೆ, ಹುಲ್ಲು ವಿತರಣೆ

ಮೈಸೂರು,ಏ.5:- ಶ್ರೀ ರಾಮಚಂದ್ರಾಪುರ ಮಠದ ಭಾರತೀಯ ಗೋಪರಿವಾರದಿಂದ ಹಾಗೂ ಅಪೂರ್ವ ಸ್ನೇಹ ಬಳಗದ ಸಹಯೋಗದೊಂದಿಗೆ ನಗರದ ಚಾಮುಂಡಿಪುರಂ ನಂಜುಮಳಿಗೆ, ಅಗ್ರಹಾರದ ಸುತ್ತಮುತ್ತಲಿನ ಹಸುಗಳಿಗೆ ಇಂದು ಜೋಳದ ತೆನೆ, ಹುಲ್ಲು ವಿತರಿಸಲಾಯಿತು.

ನಂತರ ನಗರಪಾಲಿಕೆ ಸದಸ್ಯರಾದ ಮಾವಿ. ರಾಂಪ್ರಸಾದ್ ಮಾತನಾಡಿ ಸರ್ಕಾರಗಳ ಆಡಳಿತ ಹಾಗೂ ಸಂಘ-ಸಂಸ್ಥೆಗಳು ಮನುಷ್ಯರ ಹಸಿವನ್ನು ನೀಗಿಸಲು ಶ್ರಮಿಸುತ್ತಿವೆ. ಈ ನಡುವೆ ತರಕಾರಿ ಮಾರುಕಟ್ಟೆ, ಹೋಟೆಲ್, ಮದುವೆ ಮಂಟಪ ಸೇರಿದಂತೆ ಹಲವು ಜಾಗಗಳ ಲಾಕ್ ಡೌನ್ ನಿಂದಾಗಿ ಬೀಡಾಡಿ ದನಗಳು ಮೇವಿನ ಕೊರತೆ ಎದುರಿಸುತ್ತಿವೆ. ಜೊತೆಗೆ ಮೇವು ಸಾಗಾಟವೂ ಎಂದಿನಂತಿಲ್ಲ. ಜೊತೆಗೆ ರೈತರ ಬೆಳೆಯ ಕಟಾವು, ಸಾಗಾಟ ಮತ್ತು ಮಾರಾಟವೂ ಮೊದಲಿನಂತಿಲ್ಲ. ಹೀಗಿರುವಾಗ ರೈತರಿಗೂ ಅನುಕೂಲವಾಗಲೆಂಬ ಸದಾಶಯದಿಂದ ಅವರಿಂದಲೇ ಮೇವು ಖರೀದಿಸಿ ದನಗಳು ಹೆಚ್ಚಿರುವ ಜಾಗಗಳನ್ನು ಗುರುತಿಸಿ ಅಲ್ಲೆಲ್ಲಾ ಮೇವು ವಿತರಣೆ ಮಾಡಲಾಯಿತು. ನಂತರ ಮಾಧವರಾವ್ ವೃತ್ತದಲ್ಲಿನ ಟಾಂಗಾ ನಿಲ್ದಾಣಕ್ಕೂ ಭೇಟಿ ನೀಡಿ ಅಲ್ಲಿನ ಕುದುರೆಗಳಿಗೂ ಮೇವಿನ ವ್ಯವಸ್ಥೆ ಮಾಡಲಾಯಿತು ಎಂದರು.

ಇದೇ ಸಂದರ್ಭದಲ್ಲಿ ಅಪೂರ್ವ ಸ್ನೇಹ ಬಳಗದ‌ ಅಧ್ಯಕ್ಷರಾದ ಅಪೂರ್ವ ಸುರೇಶ್ ,ಮಾಜಿ ನಗರ ಪಾಲಿಕೆ ಸದಸ್ಯರಾದ ಎಂ.ಡಿ ಪಾರ್ಥಸಾರಥಿ, ಕೃಷ್ಣರಾಜೇಂದ್ರ ಸಹಕಾರ ಬ್ಯಾಂಕ್ ಉಪಾಧ್ಯಕ್ಷರಾದ ಬಸವರಾಜು (ಬಸಪ್ಪ),‌ ಶ್ರೀರಾಮಚಂದ್ರಾಪುರ ಮಠದ ಭಾರತೀ ಗೋಪರಿವಾರದ ಮೈಸೂರಿನ ಸಂಚಾಲಕರಾದ ರಾಕೇಶ್ ಭಟ್ ,ಯುವ ಮುಖಂಡರಾದ ವಿಕ್ರಂ ಅಯ್ಯಂಗಾರ್, ಅಜಯ ಶಾಸ್ತ್ರಿ ,  ಸಂದೀಪ್, ಸಿದ್ದೇಶ್ ತೀರ್ಥಕುಮಾರ್, ಮಂಜಪ್ಪ, ವೆಂಕಟೇಶ್ ಮುಂತಾದವರು ಇದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: