ಮೈಸೂರು

ಪೌರಕಾರ್ಮಿಕರಿಗೆ ರಕ್ಷಣಾ ಸಲಕರಣೆ ನೀಡಿ ಚರಂಡಿ ಶುಚಿಗೊಳಿಸಲು ಮನವಿ

ಮೈಸೂರು,ಏ.4:- ಇಡೀ ಪ್ರಪಂಚವೇ ಇಂದು ಕೊರೋನಾ ವೈರಾಣು ಎದುರು ಜರ್ಜರಿತವಾಗಿದೆ. ಇದರ ವಿರುದ್ಧ ಜನರು ನಾನಾ ರೀತಿಯ ಕವಚಗಳಿಂದ ರಕ್ಷಣೆ ಪಡೆಯುತ್ತಿದ್ದಾರೆ. ಈ ಸಂದರ್ಭದಲ್ಲಿ ಪೌರಕಾರ್ಮಿಕರ/ಕಾರ್ಮಿಕರ ಕಾರ್ಯವು ಅತ್ಯಂತ ಶ್ಲಾಘನೀಯ. ಆದರೆ ಇವರನ್ನು ಈ ಸಂದರ್ಭದಲ್ಲೂ ಕೆಟ್ಟದಾಗಿ ನಡೆಸುಕೊಳ್ಳುತ್ತಿರುವುದು ಅತ್ಯಂತ ಖಂಡನೀಯ.

ಇದಕ್ಕೆ ಸಾಕ್ಷಿಯಂತೆ ಮೈಸೂರು ಜಿಲ್ಲೆ, ಟಿ. ನರಸೀಪುರ ತಾಲೂಕು, ಕೊಳತ್ತೂರು ಗ್ರಾಮ & ಪೋಸ್ಟ್ ನ ವ್ಯಾಪ್ತಿಯ ಕೊಳತ್ತೂರು ಗ್ರಾಮ ಪಂಚಾಯಿತಿಯ ಸರಹದ್ದಿನಲ್ಲಿ ಚರಂಡಿ ಸ್ವಚ್ಛಗೊಳಿಸಲು ಕಾರ್ಮಿಕರಿಗೆ ಯಾವುದೇ ರಕ್ಷಣಾ ಸಲಕರಣೆ ನೀಡದೆ ಸ್ವಚ್ಛಗೊಳಿಸಲು ಇಳಿಸಿದ್ದಾರೆ.  ಸ್ಥಳೀಯ ಗ್ರಾಮ ಪಂಚಾಯತ್ ಮಾನವೀಯತೆಗಾಗಿಯಾದರೂ ಕೂಡ ಒಂದು ಮಾಸ್ಕ್ ನೀಡದೆ ಅಮಾನವೀಯತೆಯಿಂದ ವರ್ತಿಸಿರುವುದು ಕಂಡು ಬಂದಿದೆ.   ಸರ್ಕಾರ ಮತ್ತು ಜಿಲ್ಲಾಡಳಿತ ಈ ಕೂಡಲೇ ಇದರ ಬಗ್ಗೆ ಗಮನ ಹರಿಸಿ ಕ್ರಮಕೈಗೊಳ್ಳಬೇಕಾಗಿದೆ ಎಂದು ಪುನೀತ್ ಎಂಬವರು ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: