ಮೈಸೂರು

ಕೊಳೆತ ಕೋಳಿ ಮಾಂಸ ಮಾರಾಟ ಮಾಡುತ್ತಿದ್ದ ಮಾಲೀಕ : ಅಂಗಡಿ ಬಂದ್ ಮಾಡಿಸಿದ ಪಾಲಿಕೆ ಅಧಿಕಾರಿಗಳು

ಮೈಸೂರು,ಏ.5:- ಚಿಕನ್ ಪ್ರಿಯರೇ ಎಚ್ಚರ,ಎಚ್ಚರ. ಸ್ವಲ್ಪ ಯಾಮಾರಿದ್ರೂ ಯಮನ ಹತ್ತಿರ ಸೇರಿಕೊಳ್ಳೋದು ಗ್ಯಾರಂಟಿ. ಯಾಕೆಂದರೆ  ಭಾನುವಾರದ ಬಾಡೂಟಕ್ಕೆ ಕೊಳಕು ಚಿಕನ್ ಬೆಂಕಿ ಇಟ್ಟಿದೆ.

ಕೋಳಿ ಜ್ವರದ ಬೆನ್ನಲೇ ಕೊಳಕು ಮಾಂಸ ಮಾರಾಟ ಬಯಲಾಗಿದ್ದು, ಕದ್ದುಮುಚ್ಚಿ ಕೊಳಕು ಚಿಕನ್ ಮಾರಾಟ ಮಾಡಲಾಗುತ್ತಿದೆ. ಎಚ್ಚತ್ತ ನಾಗರೀಕರಿಂದ ಮಾರಾಟಗಾರರ ಹುಳುಕು ಬಯಲಾಗಿದೆ. ಮೈಸೂರಿನ ಕ್ಯಾತಮಾರನಳ್ಳಿ ಕೊಳಕು ಚಿಕನ್ ಮಾರಾಟ ಮಾಡುತ್ತಿದ್ದವರನ್ನು ಪೊಲೀಸರು  ವಶಕ್ಕೆ ಪಡೆದಿದ್ದಾರೆ. ತಸ್ಕೀನ್ ಚಿಕನ್ ಅಂಡ್ ಮಟನ್ ಸೆಂಟರ್ ನಲ್ಲಿ ಒಂದು ವಾರದ ಕೊಳೆತ ಕೋಳಿ ಮಾಂಸ ಮಾರಾಟ ಮಾಡಲಾಗುತ್ತಿತ್ತು.  ಎಚ್ಚೆತ್ತ ನಾಗರೀಕರು ಪಾಲಿಕೆಗೆ ದೂರು ನೀಡಿದ್ದು, ಪಾಲಿಕೆ ಅಧಿಕಾರಿಗಳು ಸುದ್ದಿ ತಿಳಿದು ಸ್ಥಳಕ್ಕಾಗಮಿಸಿ ಅಂಗಡಿ ಬಂದ್ ಮಾಡಿಸಿದ್ದಾರೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: