ಮೈಸೂರು

ಸರಳವಾಗಿ ಡಾ. ಬಾಬು ಜಗಜೀವನರಾಂ ಅವರ 113ನೇ ಜನ್ಮದಿನಾಚರಣೆ

ಮೈಸೂರು,ಏ.5:-  ಡಾ. ಬಾಬು ಜಗಜೀವನರಾಂ ಅವರ 113ನೇ ಜನ್ಮದಿನಾಚರಣೆಯನ್ನು  ಭಾನುವಾರ ಮೈಸೂರು ಜಿಲ್ಲಾಡಳಿತದ ವತಿಯಿಂದ ಸರಳವಾಗಿ ಆಚರಿಸಲಾಯಿತು.

ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಬಿ.ರಿಷ್ಯಂತ್, ಉಪವಿಭಾಗಾಧಿಕಾರಿ ವೆಂಕಟರಾಜು, ಮತ್ತಿತರರು ಪುಷ್ಪನಮನ ಸಲ್ಲಿಸಿದರು.

ಇದೇ ವೇಳೆ ಡಾ.ಬಾಬು ಜಗಜೀವನ್ ರಾಮ್ ಅವರ ಜಯಂತಿಯ ಅಂಗವಾಗಿ   ಮೈಸೂರು ನಗರದ ರೈಲ್ವೆ   ನಿಲ್ದಾಣದ ಬಳಿಯ ಡಾ.ಬಾಬು ಜಗಜೀವನ್ ರಾಮ್ ಅವರ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಮಾಜಿ ಶಾಸಕರಾದ   ಎಂ ಕೆ ಸೋಮಶೇಖರ್,ಐಟಿ ಸೆಲ್ ನಗರಾಧ್ಯಕ್ಷರಾದ   ನಿರಾಲ್,ವಿಶ್ವ,ಗುಣಶೇಖರ್ ಮತ್ತಿತರರು ಉಪಸ್ಥಿತರಿದ್ದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: