ಪ್ರಮುಖ ಸುದ್ದಿ

ದೀಪ ಬೆಳಗಿದ ಪ್ರಧಾನಿ, ರಾಷ್ಟ್ರಪತಿ, ಮಂತ್ರಿ ಮಹೋದಯರು : ಸಿನಿ ಜಗತ್ತಿನ ತಾರೆಯರು

ದೇಶ(ನವದೆಹಲಿ)ಏ.5:- ಪ್ರಧಾನಿ ನರೇಂದ್ರ ಮೋದಿಯವರು ಏ.5ರಂದು ರಾತ್ರಿ 9ಗಂಟೆಗೆ ಮನೆಯ ವಿದ್ಯುತ್ ದೀಪವನ್ನು ಆರಿಸಿ 9ನಿಮಿಷಗಳವರೆಗೆ ಹಣತೆ, ಟಾರ್ಚ್ ಲೈಟ್, ಮೊಂಬತ್ತಿ, ಯಾವುದಾದರೂ  ದೀಪವನ್ನು ಬೆಳಗುವಂತೆ ಕರೆ ನೀಡಿದ್ದರು. ಅದನ್ನು ಅವರೂ ಕೂಡ ಇಂದು ಖುದ್ದು ಪಾಲಿಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ತಮ್ಮ ನಿವಾಸದ ಎದುರು ದೀಪ ಬೆಳಗಿ ಅದರ ಬಳಿ 9 ನಿಮಿಷಗಳ ಕಾಲ ಮೌನವಾಗಿ ನಿಂತಿದ್ದು ಕಂಡು ಬಂತು. ಇತ್ತ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಕೂಡ ಕುಟುಂಬದವರೊಂದಿಗೆ ಸೇರಿ ತಮ್ಮ ನಿವಾಸದ ಎದುರು ದೀಪ ಬೆಳಗಿದರು. ಸಚಿವರುಗಳಾದ ಪ್ರಕಾಶ ಜಾವಡೇಕರ್, ಸುರೇಶ್ ಅಂಗಡಿ ಸೇರಿದಂತೆ  ಮಂತ್ರಿ ಮಹೋದಯರು ತಮ್ಮ ತಮ್ಮ ನಿವಾಸಗಳ ಎದುರು ದೀಪ ಬೆಳಗಿದರು.

ಇನ್ನು ಕರ್ನಾಟಕದಲ್ಲಿ ಮುಖ್ಯಮಂತ್ರಿ ಬಿಎಸ.ಯಡಿಯೂರಪ್ಪ ಅವರು, ಮಾಜಿ ಪ್ರಧಾನಿ ದೇವೇಗೌಡ, ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸೇರಿದಂತೆ ಹಲವರು ರಾಜಕೀಯ ದ್ವೇಷ, ಮನಸ್ತಾಪಗಳನ್ನು ಮರೆತು ದೀಪ ಬೆಳಗಿದರು.

ಬಾಲಿವುಡ್ ತಾರೆಯರಾದ ದೀಪಿಕಾ ಪಡುಕೋಣೆ ಮತ್ತವರ ಪತಿ, ಚಂದನವನದ ತಾರೆಯರಾದ ರಾಧಿಕಾ ಕುಮಾರಸ್ವಾಮಿ, ಗೋಲ್ಡನ್ ಸ್ಟಾರ್ ಗಣೇಶ್, ಕಿಚ್ಚ ಸುದೀಪ್, ಪವರ ಸ್ಟಾರ್ ಪುನೀತ್, ಹ್ಯಾಟ್ರಿಕ್ ಹೀರೋ ಶಿವಣ್ಣ, ನಟಿ ಪ್ರಣೀತಾ, ವಸಿಷ್ಠ, ಕಿರುತೆರೆ, ಹಿರಿತೆರೆ ನಟ ಅನಿರುದ್ಧ , ತೆಲುಗು ಸೂಪರ್ ಸ್ಟಾರ್ ಚಿರಂಜೀವಿ, ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ದೀಪ ಬೆಳಗಿದರು. ಎಲ್ಲರೂ ಸಾಮಾಜಿ ಅಂತರವನ್ನು ಕಾಯ್ದುಕೊಂಡೇ ದೀಪ ಬೆಳಗಿರುವುದು ಮಾದರಿಯಾಗಿತ್ತು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: