ಮೈಸೂರು

ರೋಟರಿ ಐವರಿ ಸಿಟಿ ಮಹಿಳಾ ಘಟಕದಿಂದ ಉಚಿತ ಆಹಾರ ಪದಾರ್ಥಗಳ ಕಿಟ್ ವಿತರಣೆ

ಮೈಸೂರು, ಏ.6:- ನಗರದ ರೋಟರಿ ಐವರಿ ಸಿಟಿ ಮೈಸೂರು ಇಲ್ಲಿನ ಮಹಿಳಾ ಸದಸ್ಯರಾದ ಶಬಾನ ಇಫ್ತಿಕರ್ ಹಾಗೂ ಇಫ್ತಿಕರ್ ಅಹಮದ್‍ರವರು ಮೈಸೂರಿನ ಎನ್.ಆರ್.ಮೊಹಲ್ಲ, ಕೆಸರೆ ಹಾಗೂ ಆರ್.ಎಸ್.ನಾಯ್ಡು ನಗರಗಳಲ್ಲಿ ಬಡ ಹಾಗೂ ಅಶಕ್ತ ಕುಟುಂಬಗಳಿಗೆ ನೆರವಾಗಲು ಉಚಿತ ಆಹಾರ ಪದಾರ್ಥಗಳ ಕಿಟ್ ಅನ್ನು ಸುಮಾರು 60 ಕುಟುಂಬಗಳಿಗೆ ವಿತರಿಸಿದರು.

ಪ್ರತಿ ಕಿಟ್‍ನಲ್ಲಿ ಹತ್ತು ಕೆ.ಜಿ. ಅಕ್ಕಿ, ಐದು ಕೆ.ಜಿ. ಗೋಧಿ ಹಿಟ್ಟು, ಒಂದು ಕೆ.ಜಿ. ಉಪ್ಪು, ಅಡುಗೆ ಎಣ್ಣೆ ಎರಡು ಲೀಟರ್, ತೊಗರಿ ಬೇಳೆ, ಹೆಸರು ಬೇಳೆ ತಲಾ ಎರಡು ಕೆ.ಜಿ. ಹಾಗೂ ಸಾಂಬಾರು ಪದಾರ್ಥಗಳಾದ ಮೆಣಸಿನಪುಡಿ, ಹರಿಶಿನಪುಡಿ, ಧನಿಯಪುಡಿ ಬ್ಯಾಗನ್ನು ಅವರ ಮನೆ ಮನೆಗೆ ತೆರಳಿ ರೋಟರಿ ಐವರಿ ಸಿಟಿಯ ಮಹಿಳಾ ಸದಸ್ಯರು ನಿನ್ನೆ ಉಚಿತವಾಗಿ ವಿತರಿಸಿದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: