ಮೈಸೂರು

ಸಂಧ್ಯ ಸುರಕ್ಷ ಟ್ರಸ್ಟ್ ವತಿಯಿಂದ ಆರಕ್ಷಕ ಠಾಣೆಯ  ಸಿಬ್ಬಂದಿಗಳಿಗೆ ಊಟ ವಿತರಣೆ

ಮೈಸೂರು,ಏ.6:- ನಗರದ ಸಂಧ್ಯ ಸುರಕ್ಷ ಟ್ರಸ್ಟ್ (ರಿ), ಜಿಲ್ಲಾ ಬ್ರಾಹ್ಮಣ ಸಭೆ, ಮೈಸೂರು ಮತ್ತು ಕರ್ನಾಟಕ ಬ್ರಾಹ್ಮಣ ಹಿರಿಯ ನಾಗರಿಕ ವೇದಿಕೆ ವತಿಯಿಂದ ಟ್ರಸ್ಟಿಗಳಾದ ಕೇಂದ್ರ ಉಗ್ರಾಣ ನಿಗಮದ ರಾಜ್ಯ ನಿರ್ದೇಶಕರಾದ ಸಿರಿ ಚಾನೆಲ್ಲಿನ ಡಾ.ಜಿ.ರವಿ ಮತ್ತು ಡಾ. ಬಿ.ಆರ್. ನಟರಾಜ್ ಜೋಯಿಸ್ ಅವರ ನೇತೃತ್ವದಲ್ಲಿ   ನಿನ್ನೆ ಕುವೆಂಪುನಗರ ಆರಕ್ಷಕ ಠಾಣೆ ಹಾಗೂ ಸಂಚಾರಿ ಆರಕ್ಷಕ ಠಾಣೆಯ  ಸಿಬ್ಬಂದಿಗಳಿಗೆ ಊಟ ವಿತರಣೆ ಮಾಡಲಾಯಿತು.

ಈ ಸಮಯದಲ್ಲಿ ಮಾತನಾಡಿದ ಡಾ. ಜೋಯಿಸರು ಪೋಲಿಸರ ಅವಿರತ ಸೇವೆಯನ್ನು ಶ್ಲಾಘಿಸಿದರು. ಟ್ರಸ್ಟಿನ ಕಾರ್ಯಕರ್ತರಾದ  ಅನಂತ ಪ್ರಸಾದ್ ಮತ್ತಿರರು ಹಾಜರಿದ್ದರು. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: